Coastal Bulletin

ಬಂಟ್ವಾಳ: ಬೆಲೆ ಏರಿಕೆ, ಭ್ರಷ್ಟಾಚಾರ, ಜೊತೆಗೆ ಒಂದು ಕಡೆ ಜನರನ್ನು ಮೋಸ ಮಾಡುತ್ತಿದ್ದಾರೆ. ಹಿಂದೂ ವಿರೋಧಿ ಎಂಬ ಹೆಸರಿನೊಂದಿಗೆ ಜನಾರ್ಧನ ಪೂಜಾರಿ ಮತ್ತು ರಮಾನಾಥ ರೈಯವರನ್ನು ಸೋಲಿಸಿದ್ದಾರೆ. ಭಾವನಾತ್ಮಕವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಬಿಜೆಪಿ, ಹಿಂದುತ್ವದ ಅಮಲಿನ ಕೋಟೆಯಲ್ಲಿ ಬಿರುಕು ಬಿಟ್ಟಿದೆ ಎಂದು ಎಮ್.ಜಿ.ಹೆಗ್ಡೆ ತಿಳಿಸಿದರು.

ಅವರು ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ ರಾಯಿ ಜಂಕ್ಷನ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ದ್ವೇಷ, ಅಸೂಯೆ, ಅಸಹನೆ ಕಾಂಗ್ರೆಸ್ ಗೆ ಬೇಡ, ಹಣಕ್ಕೋಸ್ಕರ ಬಿಜೆಪಿಯವರು ಏನು ಬೇಕಾದರೂ ಮಾಡಬಹುದು, ಕಾಂಗ್ರೆಸ್ ಗೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದು ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಕಾಂಗ್ರೆಸ್ ಗ್ಯಾರಂಟಿ ಕಾಡ್೯ ಬೋಗಸ್ ಎಂದು ಬಿಜೆಪಿಯವರು ಅಫಪ್ರಚಾರ ಮಾಡುತ್ತಿದ್ದಾರೆ, ಬಡವರಿಗೆ ಉಚಿತವಾಗಿ ನೀಡುವ ಯೋಜನೆಗಳನ್ನು ಎಂದೂ ಕಾಂಗ್ರೆಸ್ ಪಕ್ಷ ನಿಲ್ಲುಸುವುದಿಲ್ಲ, ಬ್ರಷ್ಟಾಚಾರ ಮುಕ್ತ ಮಾಡುವರು ಅದರಲ್ಲೇ ಮುಳುಗಿದ್ದಾರೆ. ಅವರ ಬ್ರಷ್ಟಾಚಾರದಿಂದ ದೇಶದಾದ್ಯಂತ ಮಾತನಾಡುವಂತಾಗಿದೆ, ವಿರೋದ ಪಕ್ಷದವರು ನನ್ನ ಕೆಲಸದ ಬಗ್ಗೆ ಚಕಾರ ಎತ್ತುವುದಿಲ್ಲ, ಕರ್ನಾಟಕದಲ್ಲಿ ಅತೀ ಹೆಚ್ಚು ಅಂಗನವಾಡಿ ಮಾಡಿದ ಕೀರ್ತಿ ನನಗೆ ಸಲ್ಲುತ್ತದೆ. ನಾನು ಮಂಜೂರು ಮಾಡಿ ಆಗದ

ಕೆಲಸ ತುಂಬಾ ಇದೆ. ಅದನ್ನು ನಾನು ಮತ್ತೆ ಶಾಸಕ ನಾಗಿ ಬಂದು ಎಲ್ಲವನ್ನು ಸಂಪೂರ್ಣ ಮಾಡುತ್ತೇನೆ, ನನ್ನನ್ನು ಸೋಲಿಸಿದ ರೀತಿ ಸರಿ ಇಲ್ಲ,ನಾನು ಆಸೆ, ಆಕಾಂಕ್ಷೆಗೆ ಕೈ ನೀಡಿಲ್ಲ, ಯಾರನ್ನೂ ತಲೆ ತಗ್ಗಿಸುವ ಕೆಲಸ ಮಾಡ್ಲಿಲ್ಲ, ಇದು ನನ್ನ ಕೊನೆಯ ಚುನಾವಣೆ ಎಂದು ತಿಳಿಸಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಜಗದೀಶ್ ಕೊಯಿಲ 2013-2018ರ ವರೆಗಿನ ವರದಿ ವಾಚಿಸಿದರು.

ಈ ಸಂದರ್ಭದಲ್ಲಿ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ , ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಸಂಜೀವ ಪೂಜಾರಿ, ಸದಾಶಿವ ಬಂಗೇರ, ಸುರೇಶ್ ಜೋರಾ, ರಾಜೇಶ್ ರೋಡ್ರಿಗಸ್, ಮನೋಹರ ನೇರಂಬೋಳ್, ಚಂದ್ರಶೇಖರ ಪೂಜಾರಿ, ವಾಸು ಪೂಜಾರಿ, ಮಹಮ್ಮದ್ ಶರೀಪ್ ಉಪಸ್ಥಿತರಿದ್ದರು.

Leave a Comment