ಮಂಜೇಶ್ವರ :ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.)ಮಂಜೇಶ್ವರ.ತೂಮಿನಾಡು ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ, ದಾನಿಗಳ ಸಹಕಾರದಿಂದ ರೂಪು ಗೊಂಡ" ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ" ಸಮಾಜ ಸೇವಾ ಕಾರ್ಯ ಉದ್ದೇಶದ 14ನೇ ಕುಲಾಲ ಆಸರೆ ಸಹಾಯಹಸ್ತವನ್ನು ಕುಲಾಲ ಸಂಘ ಕುಂಬ್ದಾಜೆ ಶಾಖೆಗೋಳಪಟ್ಟ ಪೋಡಿಪಳ್ಳ ನಿವಾಸಿ ದಿ.ಕೊರಗಪ್ಪ ಮೂಲ್ಯರ ಕುಟುಂಬಕ್ಕೆ ಚೆಕ್ ಮುಖಾಂತರ ₹15,000/- ವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನ ಹಿತ್ಲು, ಸಂಘಟನಾ ಸಂಚಾಲಕರಾದ
ಸುಧೀರ್ ರಂಜನ್ ದೈಗೋಳಿ, ಕುಲಾಲ ಸಂಘ ಕುಂಬ್ದಾಜೆ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ್ ಮಾಸ್ಟರ್ ಏತಡ್ಕ ಉಪಸ್ಥಿತರಿದ್ದರು.















