ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಮುಖ್ಯವೃತ್ತ ಬಳಿ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಕೊಡಿಮರ ಮೆರವಣಿಗೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಸೋಮವಾರ ಸಂಜೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ, ಬಿ.ಪದ್ಮಶೇಖರ ಜೈನ್, ಪ್ರಮುಖರಾದ ರವಿಶಂಕರ ಶೆಟ್ಟಿ ಬಡಾಜೆ, ಕೃಷ್ಣಕುಮಾರ್ ಪೂಂಜ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಗಣೇಶ ಸುವರ್ಣ ತುಂಬೆ, ಪ್ರವೀಣ್ ಬಿ.ತುಂಬೆ, ಜಯಪ್ರಕಾಶ್ ತುಂಬೆ,
ಬಿ.ಮೋಹನ್, ಸೋಮಪ್ಪ ಕೋಟ್ಯಾನ್ , ಗಣೇಶ್ ಸಾಲ್ಯಾನ್, ದೇವದಾಸ ಪರ್ಲಕ್ಕೆ, ಪುರುಷ ಎನ್.ಸಾಲ್ಯಾನ್, ದಾಮೋದರ ನೆತ್ತರಕೆರೆ, ಬೇಬಿ ಕುಂದರ್ ,ಲೋಲಾಕ್ಷ ಶೆಟ್ಟಿ, ಸುದೀಪ್ ಕುಮಾರ್, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಪಟಾಕಿ ಸಹಿತ ಗೊಂಬೆ ಕುಣಿತ, ಕೊಂಬು ಮತ್ತು ಬ್ಯಾಂಡು ವಾದ್ಯ ಮೆರವಣಿಗೆಗೆ ಮೆರುಗು ನೀಡಿತು.














