Coastal Bulletin

ಬಂಟ್ವಾಳ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ, ನೇತ್ರಾವತಿ ವಲಯ, ಮಂಗಳೂರು ಇದರ ಉಚಿತ ಯೋಗ ಶಿಕ್ಷಣ ತರಗತಿಯ ಪ್ರಯುಕ್ತ, ಸಿದ್ದಕಟ್ಟೆ ಶ್ರೀ ಪಂಚದುರ್ಗ ಪರಮೇಶ್ವರಿ ಶಾಖೆಯ ವತಿಯಿಂದ ಮಾತೃವಂದನ, ಮಾತೃ ಪೂಜನಾ ಮತ್ತು ಮಾತೃಭೋಜನ ಕಾರ್ಯಕ್ರಮವು ಸಿದ್ದಕಟ್ಟೆಯ ಅಶ್ವಿನಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.

ಯೋಗ ಶಿಕ್ಷಣ ಸಮಿತಿಯ ಕುಕ್ಕಿಪಾಡಿ ಶಾಖೆಯ ಮುಖ್ಯ ಶಿಕ್ಷಕಿ ಶಶಿಕಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ, ಸಂಘಟನೆ, ಸೇವೆಯನ್ನು ಮುಖ್ಯ ಧ್ಯೇಯವಾಗಿಟ್ಟುಕೊಂಡು ಸಮಾಜಿ ಮುಖಿ ಕಾರ್ಯ ನಡೆಸುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯ ಶ್ಲಾಘನಿಯ ಎಂದು ಹೇಳಿದರು.

ಪ್ರಗತಿಪರ ಕೃಷಿಕೆ ಸರೋಜಿನಿ ಎಸ್. ಶೆಟ್ಟಿ ಪೊಡುಂಬ, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿಅಲಕ್ಕೆ, ಪ್ರಮುಖರಾದ ಡಾ. ಪ್ರಭಾಚಂದ್ರ, ಸುಭಾಶ್ ಪೆರಾಡ್ಕರ್, ರತ್ನ ಕುಮಾರ್ ಚೌಟ, ಸಂದೇಶ್ ಶೆಟ್ಟಿ ಪೊಡುಂಬ, ಸಂದೀಪ್ ಶೆಟ್ಟಿ ಪೊಡುಂಬ, ಸುರೇಶ್ ಶೆಟ್ಟಿ ಪೂವಳ, ದಿನೇಶ್ ಶೆಟ್ಟಿ ದಂಬೆದಾರ್, ಸಂತೋಷ್ ಕೆ. ಕೊಲ, ಸಿದ್ದಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಶೆಟ್ಟಿ, ಸದಸ್ಯರಾದ ಭರತ್ ಕುಮಾರ್ ಜೈನ್,

ಸಂತೋಷ್ ಕುಮಾರ್, ನೋಣಯ ಶೆಟ್ಟಿಗಾರ್, ದಿನೇಶ್ ಸುವರ್ಣ ರಾಯಿ, ವಾಸುದೇವ ಆಚಾರ್ಯ, ಸಚ್ಚಿದಾನಂದ ಭಟ್, ಉದಯ ಗುಂಡೂರಿ, ಡಾ. ಕೃಷ್ಣ ಮೂರ್ತಿ, ಸಿದ್ದಕಟ್ಟೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಶಾಖಾ ಸಂಚಾಲಕ ಮೋಹನ್‌ಜಿ.ಮೂಲ್ಯ, ಸಹ ಸಂಚಾಲಕ ದುರ್ಗಾ ದಾಸ್ ಶೆಟ್ಟಿ ಕರೆಂಕಿಜೆ, ಪೊಳಲಿ ಸಮಿತಿ ಪ್ರಮುಖರಾದ ರೇಖಾ, ಜನಾರ್ದನ, ಪೂರ್ಣಿಮಾ , ಜಿಲ್ಲಾ ಪ್ರಮುಖರಾದ ಶಿವಪ್ರಸಾದ್, ಲೋಕೇಶ್,ಭರತ್,  ಧರಣೇಶ್ , ಪ್ರಸಾದ್ ಸಿದ್ದಕಟ್ಟೆ  ಮತ್ತು ಯೋಗ ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಯೋಗ ಶಿಕ್ಷಣ ಸಮಿತಿಯ ಭವ್ಯಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಮಹೇಶ್ ಪೊಳಲಿ ನಗರ ಪ್ರಸ್ತಾವಿಸಿದರು.ಅಕ್ಷತಾ ವರದಿ ವಾಚಿಸಿದರು. ವೇದಾ ವಂದಿಸಿದರು. ಸರಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾತೆಯರನ್ನು ಪಾದ ಪೂಜೆ ನಡೆಸಿ ಗೌರವಿಸಲಾಯಿತು.

Leave a Comment