Coastal Bulletin

ಬಂಟ್ವಾಳ: ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನ ಉನ್ನತ್ ಭಾರತ್ ಮತ್ತು ಎನ್ ಎಸ್ ಎಸ್ ಘಟಕ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ, ಲಯನ್ಸ್ ಕ್ಲಬ್ ಮಾಣಿ ಹಾಗೂ ಗ್ರಾಮ ಪಂಚಾಯತ್ ನೆಟ್ಲಮುಡ್ನೂರು ಇದರ ಜಂಟಿ ಆಶ್ರಯದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಣ್ಣಿನ ಫಲವತ್ತತೆ, ಜೈವಿಕ ಗೊಬ್ಬರದ ಬಳಕೆ ಹಾಗೂ ಕೃಷಿ ಯಂತ್ರೋಪಕರಣಗಳ ಕುರಿತು ಎರಡು ದಿನಗಳ ಮಾಹಿತಿ ಮತ್ತು ಕಾರ್ಯಗಾರ ಸೆ.22ಮತ್ತು 23ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆನರಾ ಇಂಜಿನೀಯರಿಂಗ್ ಕಾಲೇಜಿನ ಮಾನ್ಯತಾ ವಿಭಾಗದ ಡೀನ್ ಡಾ. ವೆಂಕಟೇಶ್ ಎನ್, ಕೃಷಿಯಲ್ಲಿ ರೈತರ ಆದಾಯ ವೃದ್ಧಿಗೆ ತಂತ್ರಜ್ಞಾನದ ಜೊತೆಗೆ ಮಣ್ಣಿನ ಪೋಷಕಾಂಶ ಹೆಚ್ಚಿಸುವ ಅಗತ್ಯವಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ

ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಅಧ್ಯಕ್ಷ ಪುಷ್ಪರಾಜ್ ಚೌಟರವರು ರೈತರಿಗೆ ಇಂತಹ ಕಾರ್ಯಗಾರದ ಅಗತ್ಯವಿದ್ದು ಇದರಿಂದ ಅವರ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಸಹಕಾರಿ ಆಗುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಜೈವಿಕ ಗೊಬ್ಬರದ ಅಗತ್ಯವಿದೆ ಎಂದರು.

Leave a Comment