ಅಜ್ಜಿಬೆಟ್ಟು :ಭಾ ಜ ಪಾ ಹಿಂದುಳಿದ ವರ್ಗಗಳ ಮೋರ್ಚಾದಿಂದ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮ.

Coastal Bulletin
ಅಜ್ಜಿಬೆಟ್ಟು :ಭಾ ಜ ಪಾ ಹಿಂದುಳಿದ ವರ್ಗಗಳ ಮೋರ್ಚಾದಿಂದ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮ.

ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚ ಬಂಟ್ವಾಳ ಅಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರ ಆಶಯದಂತೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮದ ಪ್ರಯುಕ್ತ ಇಂದು ಬಂಟ್ವಾಳ ಮಂಡಲದ ಹಿರಿಯ ಕಾರ್ಯಕರ್ತ ಪ್ರಮೋದ್ ಅಜ್ಜಿಬೆಟ್ಟು ಇವರಿಗೆ ಸಸಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅವರ ಧರ್ಮಪತ್ನಿ ಪುರಸಭೆ ಸದಸ್ಯೆ ವಿದ್ಯಾವತಿ ಪ್ರಮೋದ್ ಉಪಸ್ಥಿತರಿದ್ದರು. ಮಂಡಲದ ಒಬಿಸಿ ಮೋರ್ಚಾ ದ ಅಧ್ಯಕ್ಷ ಯಶೋಧರ ಕರ್ಬೆಟ್ಟು ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಓಬಿಸಿ ಅಧ್ಯಕ್ಷ ಮಹೇಶ್ ಜೋಗಿ ಮತ್ತು ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಹಾಗೂ ಜಿಲ್ಲಾ ಒಬಿಸಿ ಉಪಾಧ್ಯಕ್ಷ ಹಾಗೂ ಬಂಟ್ವಾಳ

ಒಬಿಸಿ ಪ್ರಭಾರಿ ವಿನೋದ್ ಬೆಳ್ಳೆಯಾರು ಮತ್ತು ಪ್ರ. ಕಾರ್ಯದರ್ಶಿ ಶಶಿಧರ ಕಲ್ಮಂಜ, ಜಿಲ್ಲಾ ಒಬಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಚಿದಾನಂದ ಕಲ್ಲಡ್ಕ ಮತ್ತು ಬಂಟ್ವಾಳ ಒ ಬಿ ಸಿ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ ಹಾಗೂ ಮೋಹನ್ ದಾಸ ಕೊಟ್ಟಾರಿ ಹಾಗೂ ಬಂಟ್ವಾಳ ಒಬಿಸಿ ಮಂಡಲದ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Comment