ತುಂಬೆ :ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಹೆಣ್ಣು ಮಕ್ಕಳ ದೌರ್ಜನ್ಯ ತಡೆ “ಬಗ್ಗೆ ಮಾಹಿತಿ ಕಾರ್ಯಗಾರ.

Coastal Bulletin
ತುಂಬೆ :ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಹೆಣ್ಣು ಮಕ್ಕಳ ದೌರ್ಜನ್ಯ ತಡೆ “ಬಗ್ಗೆ ಮಾಹಿತಿ ಕಾರ್ಯಗಾರ.

ಬಂಟ್ವಾಳ :ವಿದ್ಯಾರ್ಥಿಗಳು ದುಶ್ಚಟಗಳಿಗೆ, ಡ್ರಗ್ಸ್ಗಳಿಗೆ ಒಮ್ಮೆ ದಾಸನಾದರೆ ಅದರಿಂದ ಮುಕ್ತಿ ಹೊಂದಲು ಸಾಧ್ಯವೇ ಇಲ್ಲ. ಆದುದರಿಂದ ಪ್ರಾರಂಭದಲ್ಲೇ ಡ್ರಗ್ ನಿರಾಕರಣೆ ಮಾಡುವುದೊಂದೇ ದಾರಿಯಾಗಿದೆ. ಹದಿನೆಂಟರ ವಯೋಮಾನದ ಕೆಳಗಿನವರು ಸಾರಿಗೆ ಇಲಾಖಾ ನಿಯಮ ಮೀರುವುದು, ಸೈಬರ್ ಅಪರಾಧಿಗಳಾಗುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಹೆಸರು ಕ್ರಿಮಿನಲ್ ರೆಕಾರ್ಡ್ನಲ್ಲಿ ದಾಖಲಾದರೆ ಮುಂದೆ ಅವರು ಅನೇಕ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂಬುದಾಗಿ ಬಂಟ್ಟಾಳ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ಹೇಳಿದರು.

ಅವರು ದ.ಕ. ಜಿಲ್ಲಾ ಪೋಲೀಸ್, ಬಂಟ್ಟಾಳ ಉಪ ವಿಭಾಗ, ರೋಟರಿ ಕ್ಲಬ್ ಮೊಡಂಕಾಪು ನಮ್ಮ ನಾಡು ಬಂಟ್ಟಾಳ ಮತ್ತು ತುಂಬೆ ಪ.ಪೂ. ಕಾಲೇಜಿನಿನ ಸಹಯೋಗದೊಂದಿಗೆ ತುಂಬೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ “ ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಹೆಣ್ಣು ಮಕ್ಕಳ ದೌರ್ಜನ್ಯ ತಡೆ “ ಯ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. 

 ನಮ್ಮ ನಾಡು ಬಂಟ್ಟಾಳ ಘಟಕದ ಅಧ್ಯಕ್ಷ ರೊI ಪಿ.ಎ.ರಹೀಂ

ಪ್ರಾಸ್ತಾವಿಕವಾಗಿ ಮಾತನಾಡಿ, ಅಹ್ಮದ್ ಹಾಜಿ ಮುಹಿಯುದ್ದೀನ್ರವರು ತುಂಬೆಗೆ ಕೊಟ್ಟ ಶಿಕ್ಷಣ ಸಂಸ್ಥೆಯ ಸಾಧನೆ ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 

 ಬಂಟ್ಟಾಳ ಮೊಡಂ ಕಾಪುವಿನ ರೋಟರಿ ಕ್ಲಬ್ ಅಧ್ಯಕ್ಷ ರೊI ಅಲೆಗ್ಸಾಂಡರ್ ಲೋಬೋ, ನಮ್ಮ ನಾಡು ಒಕ್ಕೂಟದ ಸದಸ್ಯ ಸಮಾಜ ಸೇವಕ ಇಬ್ರಾಹಿಂ, ಮುಂತಾದವರು ಉಪಸ್ಥಿತರಿದ್ದ ಸಮಾರಂಭದಲ್ಲಿ ಮೊದಲಿಗೆ ಹಿರಿಯ ಉಪನ್ಯಾಸಕಿ ಕವಿತಾ ಕೆ. ಸ್ವಾಗತಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು. ಉಪನ್ಯಾಸಕಿ ವೀಣಾ ಎಂ. ವಂದಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಸಾಯಿರಾಂ ಜೆ. ನಾಯಕ್ ಕೆ. ನಿರೂಪಿಸಿದರು.

Leave a Comment