ಶೇರಾ: ಐಡಿಯಲ್ ಕಾಶ್ಯು ಇಂಡಸ್ಟ್ರೀಸ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ. ಸಾಧಕರಿಗೆ ಸನ್ಮಾನ.

Coastal Bulletin
ಶೇರಾ: ಐಡಿಯಲ್ ಕಾಶ್ಯು ಇಂಡಸ್ಟ್ರೀಸ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ. ಸಾಧಕರಿಗೆ ಸನ್ಮಾನ.

ಬಂಟ್ವಾಳ :ಐಡಿಯಲ್ ಕಾಶ್ಯು ಇಂಡಸ್ಟ್ರೀಸ್ ಶೇರಾ ಇಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಹಿರಿಯ ಮಾರ್ಗದರ್ಶಕ ಜೆ ಕೆ ನಾಯರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಕೆಲಸ ಮಾಡುವ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಅಗತ್ಯ ಅಂತಹ ಸಿಬ್ಬಂದಿಗಳು ನಮ್ಮಲ್ಲಿದ್ದಾರೆ. ಅವರ ಬೇಕು ಬೇಡ ಗಳಿಗೆ ಸ್ಪಂದಿಸುವ ಮಾಲಕರು ಅನ್ಯೋನ್ಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಪರವಾಗಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವೇದಿಕೆ (ರಿ) ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ನಿವೃತ್ತ ಪ್ರಾಚಾರ್ಯ ಎಸ್ ಮಹೇಶ್ ಭಟ್, ಕಡೇಶ್ವಾಲ್ಯ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ರಾವ್ ಅವರನ್ನು

ಸನ್ಮಾನಿಸಲಾಯಿತು.

ಸಂಸ್ಥೆಯ ಮಾಲಕ ಎಸ್ ಗಂಗಾಧರ್ ಶೇರಾ ಸ್ವಾಗತಿಸಿದರು.ಮಲ್ಲಿಕಾ ಗಂಗಾಧರ್, ನೂತನ್ ಕುಮಾರ್, ವತನ್ ಕುಮಾರ್ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಚಂದ್ರಶೇಖರ್, ಶ್ರೀಧರ್ ಶೆಟ್ಟಿ,ಪುರುಷೋತ್ತಮ್, ಕೃಷ್ಣಪ್ಪ ಪೂಜಾರಿ ಸುಭಾಸ್, ಉಮೇಶ್,ದೇಜಪ್ಪ ಪೂಜಾರಿ,ಶ್ರೀಜಾ ಧನಲಕ್ಶ್ಮೀ, ರೇವತಿ, ಸವಿತ, ಸೌಮ್ಯ, ವೀಣಾ ಸಹಕರಿಸಿದರು.ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿ. ಧನ್ಯವಾದವಿತ್ತರು.

Leave a Comment