ಸುತ್ತಲೂ ಕತ್ತಲು, ಆದರೂ ಸುಂಕ ವಸೂಲಿ. ಅವ್ಯವಸ್ಥೆಯ ಆಗರ, ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ

ಯಾದವ ಕುಲಾಲ್ ಬಿ ಸಿ ರೋಡ್.
ಸುತ್ತಲೂ ಕತ್ತಲು, ಆದರೂ ಸುಂಕ ವಸೂಲಿ. ಅವ್ಯವಸ್ಥೆಯ ಆಗರ, ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ

ಬಿ.ಸಿ.ರೋಡ್ :ಸುತ್ತಲೂ ಕತ್ತಲು, ಆದರೂ ಸುಂಕ ವಸೂಲಿ ಮಾಡಬೇಕು, ಇದು ಅವರ ಜೀವನ ನಿರ್ವಹಣೆಗೆ ಮಾಡಬೇಕಾಗುವ ಉದ್ಯೋಗ, ಕತ್ತಲಿನ ನಡುವೆಯೂ ಪ್ರಕಾಶಮಾನವಾಗಿ ಬರುತ್ತಿರುವ ವಾಹನಗಳನ್ನು ತಡೆದು ನಿಲ್ಲಿಸುವುದೇ ಒಂದು ಸಾಹಸ. ಹೀಗೆ ತಡೆದು ವಾಹನಗಳನ್ನು ನಿಲ್ಲಿಸಿ ಸುಂಕ ವಸೂಲಿ ಮಾಡಿದರೂ ವಾಹನ ಸವಾರರಿಂದ ವ್ಯಂಗ್ಯ ಮಾತುಗಳನ್ನು ಕೇಳುವುದು ತಪ್ಪಿಲ್ಲ. ಇದೆಲ್ಲಾ ನಡೆಯುತ್ತಿರುವುದು ಬ್ರಹ್ಮರಕೂಟ್ಲು ಟೋಲ್ ಫ್ಲಾಜಾದಲ್ಲಿ.

ಮೂರು ಬೃಹತ್ ಮರ್ಕ್ಯುರಿ ಕಂಬ ಹಾಗೂ ೧೪ ಸ್ಟ್ರೀಟ್ ಲೈಟ್ ಕಂಬಗಳಿದ್ದು ಅದು ಉರಿಯದೆ ಅದೆಷ್ಟೋ ತಿಂಗಳುಗಳೇ ಕಳೆದಿದೆ. ಕೆಲವು ಕಂಬದಲ್ಲಿ ಉರಿಯಬೇಕಾದ ಬಲ್ಬುಗಳಿಲ್ಲ, ಕೆಲವು ಕಂಬಗಳಲ್ಲಿ ಇದ್ದರೂ ಅದು ನೇತಾಡುತ್ತಿದೆ. ನೂತನ ಬೃಹತ್ ವಿದ್ಯುತ್ ಕಂಬ ಅಳವಡಿಸಲು ತೋಡಿದ ಹೊಂಡದಲ್ಲಿ ನೀರು ತುಂಬಿದೆ. ಬಂಟರ ‘ವನದ ಬಳಿ ಇರುವ ಸೇತುವೆಯಿಂದ ಬ್ರಹ್ಮರಗುಡಿ ಇರುವ ಸೇತುವೆ ತನಕ ಸಾಲು ಸಾಲು ವಿದ್ಯುತ್ ಕಂಬಗಳು, ಬೃಹತ್ ಮರ್ಕ್ಯುರಿ ಕಂಬಗಳಿದ್ದರೂ ಅದರಲ್ಲಿ ಲೆ‘ಟ್ ಉರಿಯದೇ ಕಾರ್ಮಿಕರು, ಪ್ರಯಾಣಿಕರು ಕತ್ತಲ್ಲಿ ಪರದಾಡುವಂತಾಗಿದೆ.

ಕಾರ್ಮಿಕರ ಜೀವಕ್ಕೆ ಆಪತ್ತು : ರಾತ್ರಿಯಾಗುತ್ತಿದ್ದಂತೆ ಸುಂಕ ವಸೂಲಿ ಮಾಡುತ್ತಿರುವ ಕಾರ್ಮಿಕರಿಗೆ ಎದೆ ಡವಡವ ಶುರುವಾಗುತ್ತಿದೆ. ಅತೀ ವೇಗದಿಂದ ಬರುವ ವಾಹನಗಳನ್ನು ತಡೆದು ವಸೂಲಿ ಮಾಡಬೇಕು, ಮತ್ತೊಂದೆಡೆ ಸುಂಕ ನೀಡುವುದನ್ನು ತಪ್ಪಿಸಿಕೊಳ್ಳಲು ವಿರುದ್ಧ ದಿಕ್ಕಿನಿಂದಲೂ ವಾಹನಗಳು ಸಂಚರಿಸುತ್ತಿದ್ದು, ಅದನ್ನೂ ಗಮನಿಸಬೇಕು, ಸುಂಕ ವಸೂಲಿ ಮಾಡುವ ಜಾಗ ಮೊದಲೇ ಇಕ್ಕಟ್ಟಾಗಿದ್ದು, ಕತ್ತಲೆಯಲ್ಲಿ ವಾಹನ ಚಾಲಕರಿಂದ ಜೀವ ಪಣಕ್ಕಿಟ್ಟು ಸುಂಕ ವಸೂಲಿ ಮಾಡುವಂತಾಗಿದೆ.

ಅಫಘಾತ ತಡೆಯಲು ತಂದಿರಿಸಿದ ಕಾಂಕ್ರೀಟ್ ಬ್ಲಾಕ್‌ಗಳನ್ನು ಅಳವಡಿಸದಿರುವುದು : ಬ್ರಹ್ಮರಕೂಟ್ಲು ಸರ್ವೀಸ್ ರಸ್ತೆಯಿಂದ ಟೋಲ್ ಪ್ಲಾಜಾ ಬಳಿ ಬರುವಲ್ಲಿ ವಾಹನಗಳು ಎರ್ರಾಬಿರ್ರಿಯಾಗಿ ಸಂಚರಿಸುತ್ತಿದ್ದು, ಇದರಿಂದಾಗಿ ನಿರಂತರವಾಗಿ ಅಪಘಾತವಾಗುತ್ತಿದ್ದು, ಇದಕ್ಕಾಗಿ ಸುಮಾರು ೨೫ ಕಾಂಕ್ರೀಟ್ ರಸ್ತೆ ವಿ‘ಜಕ ಬ್ಲಾಕ್‌ಗಳನ್ನು ತಂದಿರಿಸಲಾಗಿತ್ತು. ಆದರೆ ಅದನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ರಾಶಿ ಹಾಕಿದ್ದು ಅಪಘಾತದ ಸಮಸ್ಯೆ ಪರಿಹರಿಸಲು ತಂದಿಟ್ಟ ಬ್ಲಾಕ್‌ಗಳೇ, ಡಿವೆ‘ಡರ್ ಉದ್ದಕ್ಕೆ ಇಡಬೇಕಾಗಿದ್ದ ಕಾಂಕ್ರೀಟ್ ಬ್ಲಾಕ್‌ಗಳೇ ಈಗ ದೊಡ್ಡ ಸಮಸ್ಯೆಯಾಗುತ್ತಿದೆ.


ಅಷ್ಟೇ ಅಲ್ಲದೆ ಬ್ರಹ್ಮರಕೂಟ್ಲು ಟೋಲ್

ಪ್ಲಾಝಾ ಮಾತ್ರ ಯಾವುದೇ ರೀತಿಯಲ್ಲೂ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗಿಲ್ಲ. ಹೆದ್ದಾರಿ ಬದಿಯಲ್ಲಿ ಪ್ರವಾಸಿಗರಿಗೆ ಯೋಗ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲ. ಈಗ ಸರ್ವೀಸ್ ರಸ್ತೆಯ ಬಳಿ ನಿರ್ಮಾಣವಾಗಿರುವ ಶೌಚಾಲಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಪ್ರಯೋಜನಕ್ಕಿಲ್ಲದಂತಾಗಿದೆ. ಹೆದ್ದಾರಿಯಲ್ಲಿ ಸಂಸದರು, ಶಾಸಕರು, ಉನ್ನತ ಮಟ್ಟದ ಅಕಾರಿಗಳು, ಜನಪ್ರತಿನಿಗಳು ದಿನನಿತ್ಯ ಸಂಚರಿಸುತ್ತಿದ್ದರೂ ಅವರಿಗೆ ಸಮಸ್ಯೆಯ ಗಂಭೀರತೆ ಇನ್ನೂ ಅರಿವಾಗಿಲ್ಲ. ಸಮಸ್ಯೆಗಳು ಕಣ್ಣೆದುರಿಗೆ ಇದ್ದರೂ ಎಚ್ಚೆತ್ತುಕೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಘೋರ ದುರಂತವಾದರೆ ಮಾತ್ರ ಗಮನ ಪರಿಹರಿಸಲು ಪ್ರಯತ್ನಿಸಬಹುದು.

*******************

ಕೇಂದ್ರ ಸರಕಾರಕ್ಕೆ ಸಂಬಂ‘ಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಸುಂಕ ವಸೂಲಿ ಮಾಡುತ್ತಿದ್ದಾರೆ. ವರ್ಷ ವರ್ಷ ಸುಂಕದ ದರ ಏರಿಕೆಯಾಗುತ್ತಲೇ ಇದೆ. ಆದರೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಯಾವುದೇ ಮೂಲ‘ತ ಸೌಕರ್ಯ ಯಾವುದೇ ಇಲ್ಲ, ಸುಂಕ ವಸೂಲಿ ಕೇಂದ್ರದ ಬಳಿಯಿಂದ ಒಂದು ಕಿಲೋ ಮೀಟರ್ ದೂರದಿಂದಲೇ ವಿದ್ಯುತ್ ಲೆ‘ಟ್‌ನ ವ್ಯವಸ್ಥೆ ಬೇಕಾಗುತ್ತದೆ. ಆದರೆ ಇಲ್ಲಿ ಟೋಲ್‌ಗೇಟ್ ಬಳಿಯೇ ಕತ್ತಲು ಆವರಿಸಿದೆ. ಪ್ರವಾಸಿರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ, ಸ್ವಚ್ಛತೆಯೂ ಇಲ್ಲ, ಹೀಗೆ ಅವ್ಯವಸ್ಥೆಯ ಕೂಪವಾಗಿ ಮಾರ್ಪಟ್ಟಿದೆ ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರ.

- ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು

********

ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರವು ಆರಂ‘ದಿಂದಲೂ ಅವ್ಯವಸ್ಥೆಯಿಂದ ಕೂಡಿರುತ್ತದೆ. ವಸೂಲಿ ಕೇಂದ್ರದ ಬಳಿ ಒಂದು ರಸ್ತೆ ಮಾತ್ರ ಕಾಂಕ್ರಿಟೀಕರಣವಾಗಿದ್ದು, ಮತ್ತೆರಡು ಕಡೆ ಹೊಂಡಗಳಿಂದು ಕೂಡಿರುತ್ತದೆ. ರಸ್ತೆಯೂ ಹೊಂಡಗಳಿಂದ ಕೂಡಿರುತ್ತದೆ. ಸರ್ವೀಸ್ ರಸ್ತೆಯಿಂದ ವಾಹನಗಳು ಬರುವಲ್ಲಿ ಡಿವೆ‘ಡರ್ ಅಳವಡಿಸದೇ ಎಲ್ಲಾ ವಾಹನಗಳು ಒಮ್ಮೆಲೇ ಬರುತ್ತಿದ್ದು, ನಿರಂತರ ಅಪಘಾತಗಳಾಗುತ್ತಾ ಇದೆ.

- ಗಣೇಶ್ ಎಸ್., ಸುಜೀರ್ ದತ್ತನಗರ, ಸ್ಥಳೀಯರು

Leave a Comment