ಬಂಟ್ವಾಳ: ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿ ಸಂದರ್ಭ ಅವಘಡದಲ್ಲಿ ಮೃತಪಟ್ಟ ಬಂಟ್ವಾಳ ತಾ.ನ ಅಮ್ಮುಂಜೆ ನರಂಗಬೆಟ್ಟು ನಿವಾಸಿ ದೀಪಕ್ ರವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಇದೇ ವೇಳೆ ದೀಪಕ್ ಕುಟುಂಬಕ್ಕೆ ಸರಕಾರದಿಂದ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನ
ಆಚಾರ್ಯ,ಉಪಾಧ್ಯಕ್ಷೆ ಪ್ರಮೀಳ,ಸದಸ್ಯರಾದ ಕಾರ್ತಿಕ್ ಬಲ್ಲಾಳ್,ರವೀಂದ್ರ ಸುವರ್ಣ ,ರೊನಾಲ್ಡ್ ಡಿಸೋಜ, ರಾಧಾಕೃಷ್ಣ ತಂತ್ರಿ,ಭಾಗೀರಥಿ,ಲೀಲಾ,ಲಕ್ಷ್ಮೀ, ಪಂ.ಅಭಿವೃದ್ಧಿ ಅಧಿಕಾರಿ ನಯನ,ಪ್ರಮುಖರಾದ ಕಿಶೋರ್ ಪಲ್ಲಿಪಾಡಿ,ಪ್ರಕಾಶ್ ಬಡಗಬೆಳ್ಳೂರು, ಜನಾರ್ಧನ ಬಾರಿಂಜೆ,ಸಂದೀಪ್ ಉಪಸ್ಥಿತರಿದ್ದರು.
















