ಮಂಗಳೂರು: ಮೂರು ದಿನಗಳ ರಾಜ್ಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ -2022 ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 26ರಿಂದ 28ರವರೆಗೆ ನಡೆಯಲಿದೆ.
ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದ ಜತೆಗೆ ನಡೆಯಲಿರುವ ಈ ಉತ್ಸವವನ್ನು ಹಾಂಗ್ಯೋ ಐಸ್ಕ್ರೀಂನ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಉದ್ಘಾಟಿಸಲಿದ್ದಾರೆ.
ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ,ತಾಂತ್ರಿಕ ಹೀಗೆ ಒಟ್ಟು 57 ರಷ್ಟು ಸ್ಪರ್ಧಾ ಕಾರ್ಯಕ್ರಮಗಳಿದ್ದು ರಾಜ್ಯದ ವಿವಿಧ ಕಾಲೇಜುಗಳ ಮೂರು
ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಹ್ಯಾಕಥಾನ್, ಟೀಮ್ ಆರ್ಡಿಎಕ್ಸ್ ಬಳಗದ ಬೈಕ್ ಸ್ಟಂಟ್, ಮೋಟೋ ಎಕ್ಸಪೋ, ಹೆಸರಾಂತ ಡಿಜೆ, ಬ್ಯಾಂಡ್ಟೀಮ್ಗಳಿಂದ ಮೂರು ದಿನಗಳ ಪ್ರೊನೈಟ್, ಫುಡ್ ಫೆಸ್ಟ್ ಹೀಗೆ ಯುವ ಸಮೂಹಕ್ಕೆ ಭರ್ಜರಿ ಮನೋರಂಜನೆಯ ಚಟುವಟಿಕೆಗಳಿಗೆ ಆಕೃತಿ ವೇದಿಕೆಯಾಗಲಿದೆ.















