ಬಂಟ್ವಾಳ :ತುಂಬೆ, ಪುದು, ಕೊಡ್ಮಾಣ್, ಮೆರಮಜಲು, ಅಡ್ಯಾರ್ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಕುಲಾಲ ಸುಧಾರಕ ಸಂಘ (ರಿ)ಫರಂಗಿಪೇಟೆ ಇದರ 29ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವವು ಮೇ 22ರಂದು ಆದಿತ್ಯವಾರ ಮಾರಿಪಳ್ಳ,ನಾಣ್ಯ.ಕುಲಾಲ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 8ಗಂಟೆಗೆ ಗಣಹೋಮ ನಡೆದು,10ರಿಂದ ವಾರ್ಷಿಕ ಕ್ರೀಡಾಕೂಟಕ್ಕೆ ಸುಂದರ ಕುಲಾಲ್ ನಾಣ್ಯ ಇವರು ಚಾಲನೆ ನೀಡಿದರು .ಮದ್ಯಾಹ್ನ 12ರಿಂದ ವಾರ್ಷಿಕ ಮಹಾ ಸಭೆ ನಡೆದು ಬಳಿಕ ಸಹ ಭೋಜನ ನಡೆಯಿತು. ನಂತರ ಸಂಗೀತ ಸ್ಪರ್ಧೆ ನಡೆಯಿತು.
ಸಂಜೆ 5 ಗಂಟೆಗೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ. ನಾರಾಯಣ ವಹಿಸಿದ್ದು,
ಮುಖ್ಯ ಅತಿಥಿಗಳಾಗಿ ಕುಲಾಲ ಸಂಘದ ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್,ತಾಲೂಕು ಅಧ್ಯಕ್ಷ ನಾರಾಯಣ ಸಿ ಪೆರ್ನೆ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ವೇದಿಕೆಯಲ್ಲಿಇದ್ದರು.
ಪ್ರಮುಖರಾದ ಲಕ್ಷ್ಮಣ್ ಅಗ್ರಬೈಲು, ಜಲಜಾಕ್ಷಿ ಕುಲಾಲ್ ಬಂಟ್ವಾಳ,ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ.ಆರ್ ದೇವದಾಸ್ ಸ್ವಾಗತಿಸಿ,ಕಮಲ ರಮೇಶ್ ಧನ್ಯವಾದವಿತ್ತರು.ನವೀನ್ ಕೊಡ್ಮನ್ ಮತ್ತು ರೇಷ್ಮಾ ವಿನಯ್ ಕಾರ್ಯಕ್ರಮ ನಿರೂಪಿಸಿದರು.














