ಪಲ್ಲಮಜಲು: ಮಹಾಪವಮಾನ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ. ಹಿಂದೂಗಳು ಒಗ್ಗಟ್ಟಾಗುವ ಕಾಲ ಸನ್ನಿಹಿತ :ಡಾ. ಪ್ರಭಾಕರ ಭಟ್.

Coastal Bulletin
ಪಲ್ಲಮಜಲು: ಮಹಾಪವಮಾನ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ. ಹಿಂದೂಗಳು ಒಗ್ಗಟ್ಟಾಗುವ ಕಾಲ ಸನ್ನಿಹಿತ :ಡಾ. ಪ್ರಭಾಕರ ಭಟ್.

ಬಂಟ್ವಾಳ :ಭಯೋತ್ಪಾದಕರು ಯಾವತ್ತೂ ಜಾತಿ, ಪಕ್ಷ, ಭಾಷೆ, ಊರು ಕೇಳುವುದಿಲ್ಲ. ಆದ್ದರಿಂದ ನಾವೆಲ್ಲರೂ ಈ ಎಲ್ಲಾ ವಿಷಯಗಳನ್ನು ಬದಿಗೊತ್ತಿ ಒಗ್ಗಟ್ಟಾಗುವ ಕಾಲ ಸನ್ನಿಹಿತವಾಗಿದೆ ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ನುಡಿದರು.

ಅವರು ಎ23ರಂದು ಬುಧವಾರ ಬಂಟ್ವಾಳ ತಾಲೂಕಿನ ಪಲ್ಲಮಜಲು ಶ್ರೀ ರಾಮಭಕ್ತಾಂಜನೇಯ ಭಜನಾ ಮಂದಿರದಲ್ಲಿ ನಡೆಯಲಿರುವ 108 ಪವಮಾನ ಪಾರಾಯಣ ಸಹಿತ ಮಹಾಪವಮಾನ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಮಾತನಾಡಿದರು.

ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯವು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಬೇಕಿದೆ. ಶತಮಾನಗಳಿಂದ ಅನೇಕ ಆಕ್ರಮಣಗಳನ್ನು ಎದುರಿಸುತ್ತಾ ಬಂದಿರುವ ಹಿಂದೂ ಸಮುದಾಯಕ್ಕೆ ಆಂಜನೇಯ ಸ್ವಾಮಿಯ ಶಕ್ತಿ ಪ್ರಾಪ್ತಿಯಾಗಲಿ ಈ ಮೂಲಕ ಆದಷ್ಟು ಬೇಗ ಕಾಶ್ಮೀರದಲ್ಲಿ ನಡೆದ ಘೋರ ಕೃತ್ಯಕ್ಕೆ ತಕ್ಕ ಶಾಸ್ತಿಯಾಗಲಿ ಎಂದು ಮಾಣಿಲ ಶ್ರೀಧಾಮದ

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶಿಸಿದರು.

ಆರಂಭದಲ್ಲಿ ಮೌನಪ್ರಾರ್ಥನೆಯ ಮೂಲಕ ಕಾಶ್ಮೀರ ದುರ್ಘಟನೆಯಲ್ಲಿ ಮಡಿದ ಹಿಂದೂಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಯಾಗ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಗಣೇಶ್ ದಾಸ್ ಪಲ್ಲಮಜಲು, ಸೇಸಪ್ಪ ದಾಸ್ ಪಲ್ಲಮಜಲು, ಸಂದೇಶ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

ರಾಮ್ ದಾಸ್ ಬಂಟ್ವಾಳ ಪ್ರಸ್ತಾವನೆಗೈದರು. ಭರತ್ ಕೊಟ್ಟಾರಿ ಕಲ್ಲಡ್ಕ ನಿರೂಪಿಸಿದರು. ತುಳಸಿ ಸುನೀಲ್ ಪ್ರಾರ್ಥಿಸಿದರು. ಹರಿಪ್ರಸಾದ್ ಭಂಡಾರಿಬೆಟ್ಟು ಸ್ವಾಗತಿಸಿದರು. ಸತೀಶ್ ಪಲ್ಲಮಜಲು ವಂದಿಸಿದರು.

Leave a Comment