ಬಂಟ್ವಾಳ :ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ಮಹಿಳಾ ದಿನಾಚರಣೆ- "ಲೇಡಿ ಲಯನ್ಸ್ ಡೇ". ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಏಪ್ರಿಲ್ ತಿಂಗಳ ಮಾಸಿಕ ಸಭೆಯೊಂದಿಗೆ ಮಕ್ಕಳ , ಮಹಿಳೆಯರ ಹಾಗೂ ಲಯನ್ಸ್ ಕುಟುಂಬದ ಸದಸ್ಯರ ವಿವಿಧ ಒಳಾಂಗಣ ಆಟೋಟಗಳು, ಮನೋರಂಜನಾ ಸ್ಪರ್ಧೆಗಳೊಂದಿಗೆ ಕಾರ್ಯಕ್ರಮ ಬಹಳ ಆಕರ್ಷಕವಾಗಿ ಮೂಡಿ ಬಂತು.
ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಸೈಬರ್ ಲಾ ಬಗೆಗಿನ ಖ್ಯಾತ ಸಂಪನ್ಮೂಲ ವ್ಯಕ್ತಿ ಶ್ರೀ ಅನಂತ ಪ್ರಭು ಜಿ ರವರು ಸೈಬರ್ ಕಳ್ಳರಿಂದ ನಾವು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಮುಂಜಾಗೃತೆ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಇವರ ಉಪನ್ಯಾಸ ಕಾರ್ಯಕ್ರಮ ಎಲ್ಲರಲ್ಲಿ ವಿಶೇಷ ಜಾಗ್ರತಿ ಮೂಡಿಸಿತು ಮತ್ತು ಹೊಸ ಭರವಸೆ ತಂದಿತು. ಹಲವರ ಅಭಿಪ್ರಾಯದಂತೆ ಈ ಕಾರ್ಯಕ್ರಮ ವರ್ಷದ ಯಶಸ್ಸು ಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕ್ಲಬ್ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಅದ್ಯಕ್ಷತೆಯಲ್ಲಿ ನಡೆದ ಮಹಿಳಾ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಗೀತಾ ಆರ್ ರಾವ್ ಹಾಗೂ ರೇಣುಕಾ ಅನಂತಕೃಷ್ಣ ರವರು ಅತಿಥಿಗಳಾಗಿ ಬಾಗವಹಿಸಿ ಸಂಸ್ಥೆಯ ವಿನೂತನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಇತ್ತೀಚಿಗೆ ನಡೆದ
ಜಿಲ್ಲಾ ಅಧಿವೇಶನದಲ್ಲಿ ಆಯ್ಕೆಯಾದ ಚುನಾಯಿತ ರಾಜ್ಯಪಾಲರಾದ ಲಯನ್ ಕುಡ್ಪಿ ಅರವಿಂದ ಶೆಣೈ, ಚುನಾಯಿತ ದ್ವಿತೀಯ ಉಪ ರಾಜ್ಯಪಾಲರಾದ ಲಯನ್ ಗೋವರ್ಧನ್ ಶೆಟ್ಟಿ , ಚುನಾವಣಾ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಪೂರ್ವ ರಾಜ್ಯಪಾಲರಾದ ಲಯನ್ ವಸಂತ ಕುಮಾರ್ ಶೆಟ್ಟಿ, ಪೂರ್ವ ರಾಜ್ಯಪಾಲರಾದ ಸಂಜೀತ್ ಶೆಟ್ಟಿ ಯವರಿಗೆ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.
ಚುನಾಯಿತ ರಾಜ್ಯಪಾಲರುಗಳು ಶುಭ ಶಂಸನೆ ನೆರವೇರಿಸಿದರು. ಕಾರ್ಯಕ್ರಮದ ಆತಿಥ್ಯ ನೀಡಿದ ಲಯನ್ ಸುನೀಲ್ ಬಿ ಮತ್ತು ಸುಮಾ ಸುನೀಲ್ ದಂಪತಿಗಳಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ಲಯನ್ ಡಾ. ಬಿ ವಸಂತ ಬಾಳಿಗಾ, ಕಾರ್ಯದರ್ಶಿ ದೇವಿಕಾ ದಾಮೋದರ್, ಕೋಶಾಧಿಕಾರಿ ದೇವಪ್ಪ ಪೂಜಾರಿ, ಲಿಯೋ ಅಧ್ಯಕ್ಷೆ ಖುಷಿ ಟಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕ್ಲಬ್ ನ ಬಹುತೇಕ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.















