ಫರಂಗಿಪೇಟೆ :ಜ. 25-26,ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ.

Coastal Bulletin
ಫರಂಗಿಪೇಟೆ :ಜ. 25-26,ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ವಿಜಯನಗರದಲ್ಲಿ ಸ್ಥಳೀಯ 6 ಗ್ರಾಮಗಳನ್ನೊಳಗೊಂಡು ನೂತನವಾಗಿ ನಿರ್ಮಾಣಗೊಂಡು ವೈಭವದ ಬ್ರಹ್ಮಕಲಶೋತ್ಸವ ದೊಂದಿಗೆ ಲೋಕಾರ್ಪಣೆಯಾದ ಶ್ರೀ ಆಂಜನೇಯ ದೇವಸ್ಥಾನಕ್ಕೆ ವರುಷ ಸಂದ ಹಿನ್ನಲೆಯಲ್ಲಿ 2 ದಿನಗಳ ಪ್ರತಿಷ್ಠಾ ವರ್ಧಂತಿ ಉತ್ಸವವು ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ 25 ಹಾಗೂ 26ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿಯ ಅಧ್ಯಕ್ಷ ಧನರಾಜ್ ಶೆಟ್ಟಿ ತೇವು ಅವರು ಜ.23ರಂದು ಬಿ ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಜ.25ನೇ ಶನಿವಾರ ಸೂರ್ಯೋದಯದಿಂದ ಸೂರ್ಯಾಸ್ತದ ತನಕ 48 ದಿನಗಳ ಸಂಧ್ಯಾ ಭಜನಾ ಸೇವೆಯ ಮಂಗಲೋತ್ಸವದ ಪ್ರಯುಕ್ತ ಅರ್ಧ ಏಕಾಹ ಭಜನೆ ನಡೆಯಲಿದ್ದು,ಬೆಳಿಗ್ಗೆ 6.45ಕ್ಕೆ ದೀಪ ಪ್ರಜ್ವಲನೆಯನ್ನು ಶ್ರೀಧರ ಶೆಟ್ಟಿ ಪುಳಿಂಚ, ವಕೀಲರು ನೆರವೇರಿಸಲಿದ್ದಾರೆ ಎಂದರು.

ರಾತ್ರಿ ಗಂಟೆ 7.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ರಾತ್ರಿ ಗಂಟೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಾ..ಪರ್ಕ ಕಲಾವಿದರು, ಕುಡ್ಲ ಇವರಿಂದ ತುಳು ಹಾಸ್ಯಮಯ ನಾಟಕ "ಏಲ್ಲಾ ಗ್ಯಾರಂಟಿ ಅತ್ತ್”ಜರುಗಲಿದೆ ಎಂದರು.

ಜ.26ನೇ ಆದಿತ್ಯವಾರ ಬೆಳಗ್ಗೆ ಗಂಟೆ 7.30ಕ್ಕೆ ಪ್ರಾತಃಕಾಲ ವಿವಿಧ ವೈದಿಕ ಪೂಜೆಗಳೊಂದಿಗೆ ವಾಯುಸ್ತುತಿ ಪುರಶ್ಚರಣ ಹೋಮ, ಕಲಶಾಭಿಷೇಕ ನಡೆಯಲಿದೆ ಬಳಿಕ ಶ್ರೀ ರವೀಂದ್ರ ಪ್ರಭು ಮತ್ತು ಬಳಗ, ಮಂಗಳೂರು

ಇವರಿಂದ ಭಕ್ತಿ ಗೀತಾಮೃತ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ ಗಂಟೆ 12.30ಕ್ಕೆಧಾರ್ಮಿಕ ಸಭೆಯಲ್ಲಿ ಯುವ ವಾಗ್ಮಿ ಹರಿಕಾ ಮಂಜುನಾಥ್ ಬೆಂಗಳೂರು ಇವರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಅಪರಾಹ್ನ ಶ್ರೀ ರಾಮಕೃಷ್ಣ ಬಾಲಗೋಕುಲ, ಮಲ್ಲೂರು ತಂಡದವರಿಂದ ನೃತ್ಯ ವೈಭವ, 6 ಗ್ರಾಮಗಳ ಪ್ರತಿಭಾನ್ವಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ – ನೃತ್ಯ ವೈವಿಧ್ಯ ರಾತ್ರಿ ಗಂಟೆ 8.00ರಿಂದ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಆಂಜನೇಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಗಾಂಭಿರ ಸುಜೀರುಗುತ್ತು,ಪ್ರ.ಕಾರ್ಯದರ್ಶಿ ಕರುಣಾಕರ ಕೊಟ್ಟಾರಿ, ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ಸಂದೇಶ್ ದಾರಿಬಾಗಿಲು, ಉಪಸ್ಥಿತರಿದ್ದರು.

Leave a Comment