ಮೊಡಂಕಾಪು ರೈಲ್ವೇ ಬ್ರಿಡ್ಜ್ ಕೆಲ ರಸ್ತೆಯಲ್ಲಿರುವ ಹೊಂಡಗಳಿಗೆ ಮುಕ್ತಿ ಯಾವಾಗ ?

ಯಾದವ ಕುಲಾಲ್ ಬಿ ಸಿ ರೋಡ್.
ಮೊಡಂಕಾಪು ರೈಲ್ವೇ ಬ್ರಿಡ್ಜ್ ಕೆಲ ರಸ್ತೆಯಲ್ಲಿರುವ ಹೊಂಡಗಳಿಗೆ ಮುಕ್ತಿ ಯಾವಾಗ ?

ಬಿ.ಸಿ.ರೋಡ್ : ಈ ರಸ್ತೆಯಲ್ಲಿ ತಿಂಗಳಿಗೊಮ್ಮೆ ತೇಪೆ ಹಚ್ಚುವುದೇ ಕಾಯಕವಾಗಿ ಬಿಟ್ಟಿದೆ. ಮಳೆಗಾಲ ಆರಂಭವಾಗಿ ಮಳೆ ನೀರು ಹಾದುಹೋಗಲು ವ್ಯವಸ್ಥೆ ಇಲ್ಲದೆ ಮುಖ್ಯ ರಸ್ತೆಯಲ್ಲೇ ನೀರು ಶೇಖರಣೆಯಾಗಿ ರಸ್ತೆಯು ಹೊಂಡಮಯವಾಗಿರುತ್ತದೆ. ಈ ಹೊಂಡಕ್ಕೆ ಕಲ್ಲುಗಳನ್ನು ತುಂಬಿಸಿ ಹೊಂಡ ಮುಚ್ಚುವ ಕೆಲಸ ಆಗಾಗ ಮಾಡುತ್ತಿದ್ದರೂ ಇನ್ನೂ ಹೊಂಡ ಮುಕ್ತ ರಸ್ತೆಯಾಗಲೇ ಇಲ್ಲ. ಈ ರಸ್ತೆ ಇರುವುದು ಬಿ.ಸಿ.ರೋಡ್ - ಕೈಕಂಬದಿಂದ ಪೊಳಲಿ ಕಡೆ ಹೋಗುವ ಮೊಡಂಕಾಪು ಎಂಬ ಊರಿನಲ್ಲಿ.. ಬಂಟ್ವಾಳ ತಾಲೂಕಿನ ಬಹಳ ಪ್ರಮುಖ ರಸ್ತೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ರಸ್ತೆ ದುರಾವಸ್ಥೆಯಲ್ಲಿದ್ದರೂ ಇನ್ನೂ ಮುಕ್ತಿ ಸಿಗಲಿಲ್ಲ.

ವಾಹನ ಸವಾರರಿಗೆ ಸಂಚಾರಕ್ಕೆ ಸವಾಲ್ : ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಹೆಚ್ಚಿನ ದ್ವಿಚಕ್ರ ವಾಹನಗಳು ಇನ್ನೊಂದು ಬದಿಯ ರಸ್ತೆಯನ್ನೇ ಅವಲಂಬಿಸಿದ್ದು ಆ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಗಂಟೆಗೇ ನೂರಾರು ವಾಹನಗಳು ಸಂಚಾರ ಮಾಡುತ್ತಿರುವಾಗ ಯಾವ ಭಾಗದಲ್ಲಿ ಹೋಗಬೇಕೇಂಬುದೇ ವಾಹನ ಸವಾರರಿಗೂ ಸಾರ್ವಜನಿಕರಿಗೂ ಸವಾಲಾಗಿದೆ. ಕೈಕಂಬದಿಂದ ಕೆಳಗೆ ಬಂದು ರೈಲ್ವೇ ಬ್ರಿಡ್ಜ್‌ನ ಸ್ವಲ್ಪ ಹತ್ತಿರ ಈ ರಸ್ತೆ ಮೂರು ಕವಲಾಗಿದೆ. ನಂತರ ರೈಲ್ವೇ ಬ್ರಿಡ್ಜ್‌ನ ಕಳಗೆ ಎರಡು ಕವಲಾಗಿದ್ದು ಮುಂದಕ್ಕೆ ಒಂದೇ ರಸ್ತೆ ಇದೆ.

ಸರಕಾರ ರಸ್ತೆ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿದರೂ ಇದರಿಂದ ಒಂದಷ್ಟು ಮಟ್ಟಿಗೆ ರಸ್ತೆ ಚೆಂದವಾಯಿತೇ ಹೊರತು ವ್ಯವಸ್ಥೆ ಸಮರ್ಪಕವಾಗಿಲ್ಲ. ಹಾಗಾದರೆ ಯಾವುದೇ ಕಾಮಗಾರಿಯ ಬಾಳ್ವಿಕೆ ಕೇವಲ ನಾಲ್ಕೈದು ವರ್ಷಗಳಿಗಷ್ಟೇ ಸೀಮಿತವೇ? ಹೀಗಾದರೆ ಅದು ಸುಮ್ಮನೆ ನೀರಿನಲ್ಲಿ ಹೋಮ ಮಾಡಿದಂತಲ್ಲವೇ ? ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ಮತ್ತು ಜನಪ್ರತಿನಿಗಳು ಈ ಬಗ್ಗ ಹೆಚ್ಚಿನ ಆಸ್ಥೆಯನ್ನು ವಹಿಸಬೇಕಾಗಿದೆ.

ಜನಪ್ರತಿನಿಗಳು ಖುದ್ದಾಗಿ ಬಂದು ಕಾಮಗಾರಿಯನ್ನು ವೀಕ್ಷಿಸಬೇಕು. ಅಧಿಕಾರಿಗಳು ಕಾಮಗಾರಿ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ, ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಮಾಡಬೇಕು. ಪ್ರತಿಯೊಂದು ಇಲಾಖೆಯೂ ಪರಸ್ಪರ ಸಂವಹನ

ಮಾಡಿ ಒಂದು ಕಾiಗಾರಿಯಿಂದ ಇನ್ನೊಂದು ಕಾಮಗಾರಿಗೆ ತೊಂದರೆಯಾಗದಂತೆ ಕಾಂii ಕೈಗೊಳ್ಳಬೇಕು. ಆಗ ಮಾತ್ರ ಬಿಡುಗಡೆಯಾದ ಅನುದಾನಕ್ಕೂ ಒಂದು ಸಾರ್ಥಕತೆ ಬರುತ್ತದೆ. ಇಲ್ಲವಾದಲ್ಲಿ ಎಷ್ಟೇ ಅನುದಾನ ಬಿಡುಗಡೆಯಾದರೂ ಅದರಿಂದ ಜನರಿಗೆ ಕಿಂಚಿತ್ತೂ ಪ್ರಯೋಜನವಾಗದೇ ತೊಂದರೆಯೇ ಎದುರಾಗುತ್ತದೆ.

********

ರಸ್ತೆ ಅಭಿವೃದ್ಧಿ ಪಡಿಸುವಾಗಲೇ ನೀರು ಹಾದುಹೋಗಲು ರಸ್ತೆಯ ಇಕ್ಕಲೆಗಳಲ್ಲಿಯೂ ಚರಂಡಿ ವ್ಯವಸ್ಥೆ ಮಾಡಬೇಕು. ಆದರೆ ರೈಲ್ವೇ ಬ್ರಿಡ್ಜ್ ಬಳಿ ಚರಂಡಿಯನ್ನೇ ಮಾಡಲಿಲ್ಲ. ಇದರಿಂದಾಗಿ ರಸ್ತೆಯಲ್ಲಿರುವ ನೀರೇಲ್ಲಾ ಬ್ರಿಡ್ಜ್‌ನ ಅಡಿಭಾಗದಲ್ಲಿ ಶೇಖರಣೆಯಾಗಿ ರಸ್ತೆಗೆ ಹಾನಿಯಾಗುತ್ತದೆ. ಸಂಬಂಧ ಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನ ಇಲ್ಲ. ಈ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಿರಂತರ ಸಂಚಾರದಲ್ಲಿದ್ದು ವಾಹನಗಳು ಸಂಚರಿಸುವಾಗ ಮಾರ್ಗದಲ್ಲಿ ಶೇಖರಣೆಯಾದ ನೀರು ಜನರ ಮೇಲೆ ಬೀಳುತ್ತದೆ. ಇದರಿಂದ ಎಲ್ಲರಿಗೂ ಕಷ್ಟ ತಪ್ಪಿದ್ದಲ್ಲ.

- ಸದಾಶಿವ ಬಂಗೇರ, ಮಾಜಿ ಬುಡಾ ಅಧ್ಯಕ್ಷರು

*******

ಮೊಡಂಕಾಪು ರೈಲ್ವೇ ಬ್ರಿಡ್ಜ್ ಅಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರು ಶೇಖರಣೆಯಾಗಿ ರಸ್ತೆ ಹೊಂಡಗಳಿಂದ ತುಂಬಿರುತ್ತದೆ. ರಸ್ತೆ ಕಾಮಗಾರಿ ಮಾಡುವಾಗಲೇ ನೀರು ಹೋಗುವ ವ್ಯವಸ್ಥೆ ಮಾಡಿರುತ್ತಿದ್ದರೆ ಇಂತಹ ಸಮಸ್ಯೆಗಳಾಗುತ್ತಿರಲಿಲ್ಲ. ಆಗ ಸರಿಯಾಗಿ ಗಮನಿಸದೇ ಇರುವ ಕಾರಣ ಈ ಭಾಗದ ಜನರಿಗೆ ಪ್ರತಿನಿತ್ಯ ತೊಂದರೆ ತಪ್ಪಿದಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಎಚೆತ್ತುಕೊಳ್ಳಲಿ.

- ಕಿಶೋರ್ ಕುಲಾಲ್ ಮೊಡಂಕಾಪು, ಸ್ಥಳೀಯರು

Leave a Comment