ಬಂಟ್ವಾಳ :ಆಸರೆ ಸೇವಾ ಫೌಂಡೇಷನ್ (ರಿ) ಪುಂಚಮೆ ಮತ್ತು ರಾಮಕೃಷ್ಣ ತಪೋವನ ಪೊಳಲಿ ಇವರ ಸಹಭಾಗಿತ್ವದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ "ವೃತ್ತಿ-ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ""ವೃತ್ತಿ-ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ"ವನ್ನು ಆ. 23ರಂದು ಬೆಳಿಗ್ಗೆ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಇವರು ಉದ್ಘಾಟಿಸಲಿದ್ದಾರೆ.
ಆ. 23ರಂದು ಶನಿವಾರ ಬೆಳಿಗ್ಗೆ 9-00ರಿಂದ ಮಧ್ಯಾಹ್ನ 1-00ರ ವರೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ-ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ.
ಆ 24ರಂದ ಸಮಯ ಬೆಳಗ್ಗೆ 09-00ರಿಂದ ಮಧ್ಯಾಹ್ನ 01-00ರ ವರೆಗೆ ಪದವಿ ಮತ್ತು
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತಾ ಕಾರ್ಯಗಾರ (IAS, IPS, KAS ಸೇರಿದಂತೆ)ನಡೆಯಲಿದೆ,ಮಧ್ಯಾಹ್ನ 02-00ರಿಂದ 05-15ರ ವರೆಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ ನಡೆಯಲಿದೆ ಎಂದು ಆಸರೆ ಸೇವಾ ಫೌಂಡೇಷನ್ ನ ಚಂದ್ರಹಾಸ ಪಲ್ಲಿಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














