ಬಂಟ್ವಾಳ ತುಂಬೆ ಗ್ರಾಮ ಪಂಚಾಯತ್ ನ ಸಭಾಂಣದಲ್ಲಿ ಮಕ್ಕಳ ಗ್ರಾಮ ಸಭೆಯು ಜೂ 21ರ ಗುರುವಾರದಂದು 10.30ಗೆ ನಡೆಯಿತು.
ಗ್ರಾ ಪಂ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ಯವರ ಉಪಸ್ಥಿತಿಯಲ್ಲಿ ತುಂಬೆ ಬಿ ಎ ಶಾಲೆಯ ವಿಧ್ಯಾರ್ಥಿನಿ ಕುಮಾರಿ ಕಾವ್ಯಾಶ್ರೀ ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು .ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ ಸುಜಾತ ಪ್ರಾಸ್ತವಿಕ ಭಾಷಣ ಮಾಡಿದರು.
ಚೈಲ್ಡ್ ಲೈನ್ ಸಹಾಯವಾಣಿ ಕೇಂದ್ರದ ಲವಿಟಾ ಡಿಸೋಜ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಸಂರಕ್ಷಣೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಸೌಮ್ಯಲತಾ ವೈಯಕ್ತಿಕ ಸ್ವಚ್ಚತೆ .ಪೌಷ್ಠಿಕ ಆಹಾರ, ಮುಟ್ಟಿನ ಅವದಿಯಲ್ಲಿ ಸ್ವಚತೆ ಬಗ್ಗೆ ಮಾಹಿತಿ ನೀಡಿದರು.ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಕ್ಷೇಮ ಕೇಂದ್ರ ತುಂಬೆ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸಿ ಪ್ರತಿ ಸೋಮವಾರ ದಿಂದ ಶುಕ್ರವಾರ ದ ವರೆಗೆ ಸಮಯ 9 ರಿಂದ 4 ರವರೆಗೆ ಸಂಪರ್ಕಿಸಲುಸೂಚಿಸಿದರು.
ಈ ಸಂದರ್ಭದಲ್ಲಿ ಅದ್ಯಕ್ಷರಲ್ಲಿ ಮಕ್ಕಳು ಶಾಲೆಗೆ ಸಂಬಂದ ಪಟ್ಟ ಹಲವು ಸಮಸ್ಯೆಗಳನ್ನು ಮುಂದಿಟ್ಟರು ತುಂಬೆ ಸರ್ಕಾರಿ
ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ,ಶಾಲೆಗೆ ಟೈಲ್ಸ್ ಹಾಕಲಾದ ವ್ಯತ್ಯಾಸದ, ಶಾಲೆಯ ತರಗತಿಯ ಹಂಚು ಬೀಳುವ ಸ್ಥಿತಿಯಲ್ಲಿದ್ದು ,ಮೇಲ್ಚಾವಣಿ ಸೋರುತಿದ್ದು, ಎರಡು ಕೊಠಡಿಗಳು ಬಿರುಕು ಬಿಟ್ಟಿದೆಎಂದರು.
ಬಿ ಎ . ಶಾಲೆಗೆ ಸಂಬಂದ ಪಟ್ಟಂತ ಪ್ಲೈ ಓವರ್ ನ ಶೀಟ್ ಹಾರಿ ಹೋದ ಬಗ್ಗೆ ಸರಿಪಡಿಸುವಂತೆ, ಮಳೆ ನೀರು ರಾಪ್ಟ್ರೀಯ ಹೆದ್ದಾರಿಯಲ್ಲಿಯೇ ಹಾದು ಹೋಗುವುದರಿಂದ ನಡೆದಾಡುವರೇ ಕಷ್ಟಸಾದ್ಯವಾಗಿದೆ,ವಳವೂರು ಶಾಲಾ ತರಗತಿಯ ಮೇಲ್ಚಾವಣಿ ಯಿಂದ ಚಿಕ್ಕ ಚಿಕ್ಕ ತುಂಡುಗಳು ಬೀಳುವುದು.ಕುನೀಲ್ ಶಾಲೆಗೆ ಬಗ್ಗೆ, ಶಾಲೆಯ ಹಿಂಬದಿ ಕೊಳಚೆ ನೀರು ನಿಲ್ಲುವ ಬಗ್ಗೆ ,ಈ ಎಲ್ಲಾ ಪ್ರಶ್ನೆಗಳಿಗೆ ಪ್ರವೀಣ್ ಬಿ ತುಂಬೆ ಮಾಹಿತಿ ನೀಡಿದ್ದರು.
ಗ್ರಾಪಂ ಅಭಿವೃದ್ದಿ ಅದಿಕಾರಿ ಚಂದ್ರಾವತಿ ಸ್ವಾಗತಿಸಿದರು.ಪಂ ಉಫಾದ್ಯಕ್ಷೆ ಜಯಂತಿ ಕೇಶವ ,ಸದಸ್ಯರಾದ ಹೇಮಲತಾ ಜಿ ಪೂಜಾರಿ, ಮಹಮ್ಮದ್ ಝಹೂರ್, ಇಬ್ರಾಹೀಂ ,ಮಹಮ್ಮದ್ ಅಝೀಜ್ ,ಜಯಂತಿ ಶ್ರೀದರ ,ಜಯಂತಿ ನಾಗೇಶ್ ಶಶಿಕಲಾ ಮನೋಹರ,ಪಂ ಲೆಕ್ಕ ಸಹಾಯಕಿ ಚಂದ್ರಕಲಾ ಜಿ. ಹಾಗೂ ಶಾಲಾ ಶಿಕ್ಷಕರು,ಅಂಗನವಾಡಿ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಹಾಗೂ ಪಂ.ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.
















