ಬಂಟ್ವಾಳ: ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ ರಾಜ್ಯ ಸರಕಾರಕ್ಕೆ, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪಾದಾಯಾತ್ರೆ ಸಮಿತಿ ಜಿಲ್ಲಾಧ್ಯಕ್ಷ ಜಿತೇಂದ್ರ ಸುವರ್ಣ ತಿಳಿಸಿದರು.
ಅವರು ಬಿಸಿರೋಡಿನ ಹೋಟೆಲ್ ರಂಗೋಲಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಮಯದಾಯದ 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜ.6 ರಂದು ಪಾದಯಾತ್ರೆ ಪ್ರಾರಂಭವಾಗಿ, ಅ ಬಳಿಕ ಫೆ. 14 ವರೆಗೆ ಸತತ 40 ದಿನಗಳ ಕಾಲ ಪ್ರಣಾವನಂದ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಐತಿಹಾಸಿಕ ಪಾದಯಾತ್ರೆ ಯಶಸ್ವಿಯಾಗಿ ನಡೆದಿತ್ತು. ಸಮುದಾಯವರು ಒಗ್ಗೂಡಿ ನಡೆಸಿದ ಫಲವಾಗಿ ಸರಕಾರ ನಿಗಮ ಘೋಷಿಸಿತು ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಲ್ಲಿ ಕನಿಷ್ಠ ಮೂರು ಶಾಸಕ ಅಭ್ಯರ್ಥಿಗಳ ಸ್ಪರ್ಧೆ ಗೆ ಅವಕಾಶ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದರು. ನಿಗಮ ಘೋಷಣೆ ಮಾಡಿದ ಬಳಿಕ ಅನುದಾನ ನಿಗದಿ ಮಾಡಿಲ್ಲ, ಶೀಘ್ರವಾಗಿ ಅನುದಾನ ನಿಗದಿ ಮಾಡಬೇಕು ಹಾಗೂ ಅತ್ಯಂತ ಸೂಕ್ತವಾದ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ
ನೇಮಕ ಮಾಡಬೇಕು,ಅರ್ಹ ವ್ಯಕ್ತಿಗಳನ್ನು ನಿರ್ದೇಶಕ ರಾಗಿ ಮಾಡಬೇಕು ಎಂದು ಅವರು ತಿಳಿಸಿದರು.
ಜೊತೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ರಾಜ್ಯಾದ್ಯಂತ ನೀರಾ ಮತ್ತು ಸೇಂದಿ ತೆಗೆಯಲು ಮಾರಾಟ ಮಾಡಲು ಅವಕಾಶ ನೀಡಬೇಕು. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಕೆಲವು ಕಾನೂನು ಚೌಕಟ್ಟನ್ನು ಮಾತು ಮೂಲಕ ಬಗೆಹರಿಸಬೇಕು ಎಂದು ಅವರು ತಿಳಿಸಿದರು.
ಸಮಾಜದ ಇನ್ನಷ್ಟು ಅಭಿವೃದ್ಧಿ ಪರ ಚಿಂತನೆಗಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ವತಿಯಿಂದ ಗ್ರಾಮ ಸಮಿತಿಗಳನ್ನು ರಚಿಸಲಿದ್ದು, ಮಾ. 12 ರಂದು ಕುದ್ರೋಳಿ ಗೋಕರ್ಣ ಕ್ಷೇತ್ರದ ಸಭಾಂಗಣ ದಲ್ಲಿ ವಿಶೇಷ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಸಮಿತಿ ಪ್ರಮುಖರಾದ ಬೇಬಿ ಕುಂದರ್, ಪ್ರೇಮನಾಥ್ ಕೆ, ನವೀನ್ ಕೋಟ್ಯಾನ್, ಸುಂದರ ಪೂಜಾರಿ,ಸತೀಶ್ ಪೂಜಾರಿ ಬಾಯಿಲ ಮತ್ತಿತರರು ಉಪಸ್ಥಿತರಿದ್ದರು.














