ಬಂಟ್ವಾಳ: ಫೆ.22 ರಿಂದ ಫೆ. 28ರವರೆಗೆ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದದಲ್ಲಿ ನಡೆಯಲಿರುವ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.22ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೆದ್ದಾರಿಯ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗಿ ಬಂತು.
ಲಯನ್ಸ್ ಕ್ಲಬ್ ಸಂಗ್ರಹಣಾ ಕೇಂದ್ರದಿಂದ ಹಸಿರುಹೊರೆಕಾಣಿಕೆ ಮೆರವಣಿಗೆಯು ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಸಾಗಿ ಕೈಕಂಬದಲ್ಲಿರುವ ಪೊಳಲಿ ದ್ವಾರದ ವರೆಗೆ ಸಾಗಿ ಅಲ್ಲಿ ಸಂಗ್ರಹಿಸಿಡಲಾಗಿದ್ದ ಹೊರೆಕಾಣಿಕೆಯನ್ನು ಸೇರಿಸಿಕೊಂಡು ವಾಪಾಸ್ ಆದೇ ಮಾರ್ಗವಾಗಿ ಬಂದು ದೇವಳದ ವಠಾರದಲ್ಲಿ ಸಂಪನ್ನಗೊಂಡಿತು.
ಲಯನ್ಸ್ ಕ್ಲಬ್ ಬಳಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಮಾಜಿ ಸಚಿವ ಬಿ. ರಮಾನಾಥ ರೈ ಅವರು ತೆಂಗಿನಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಚೆಂಡೆ, ನಾಸಿಕ್ ಬ್ಯಾಂಡ್, ಕೀಲು ಕುದುರೆ, ಚಿಲಿಪಿಲಿ ಗೊಂಬೆ ಬಳಗ,ಹುಲಿವೇಷದ ಅಬ್ಬರ ,ವಿವಿಧ ಬ್ಯಾಂಡ್ ವಾದ್ಯಗಳು ಹೊರೆಕಾಣಿಕೆಯ ಮೆರವಣಿಗೆ ವೇಳೆ ವಿಶೇಷ ಮೆರಗುನೀಡಿತು. ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಸಮೂಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಾಥ್ ನೀಡಿದರು.ಮೆರವಣಿಗೆಗೆ ಮುನ್ನ ಸುಡುಮದ್ದುಗಳ ಅಬ್ಬರವು ಜೋರಾಗಿತ್ತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜೀರ್ಣೊದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ
ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದಿರೇಶ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಹೊರೆಕಾಣಿಕೆ ಸಮಿತಿ ಸಂಚಾಲಕ ಕೃಷ್ಣಪ್ಪ ಬಿ. ಕಲ್ಲಡ್ಕ, ಸಹ ಸಂಚಾಲಕರಾದ ಭಕ್ತ ಕುಮಾರ್ ಶೆಟ್ಟಿ, ಶಿವಾನಂದ ಮೊಡಂಕಾಪು, ಪ್ರಶಾಂತ್ ಭಟ್, ಸದಾಶಿವ ಕೈಕಂಬ, ವಿವಿಧ ಸಮಿತಿ ಪ್ರಮುಖರಾದ ತಿಮ್ಮಪ್ಪ ರೈ ಏರಿಮಾರ್, ಸದಾಶಿವ ನಾಯಕ್, ಮಂಜುನಾಥ ಪೈ, ಐತಪ್ಪ ಆಳ್ವ, ಸದಾನಂದ ಶೆಟ್ಟಿ, ಐತ್ತಪ್ಪ ಪೂಜಾರಿ, ಸಂಕಪ್ಪ ಶೆಟ್ಟಿ, ಸತೀಶ್ ಭಂಡಾರಿ, ಬಿ.ಮೋಹನ್, ಜಯರಾಮ ಶೆಟ್ಟಿ, ರಮೇಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಶಂಕರ್ ಶೆಟ್ಟಿ ನಡ್ಯೋಡಿಗುತ್ತು, ಆಶಾ ಪಿ. ರೈ, ರಾಜೇಶ್ ಎಲ್. ನಾಯಕ್ ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ರಾವ್, ಬೇಬಿ ಕುಂದರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರೋನಾಲ್ಡ್ ಡಿಸೋಜಾ ಮತ್ತಿತರರು ಇದ್ದರು. ಅಪಾರ ಸಂಖ್ಯೆಯ ಭಕ್ತರು, ವಿವಿಧ ಸಂಘಟನೆಯ ಪ್ರಮುಖರು, ಗ್ರಾಮಸ್ಥರು, ಮೆರವಣಿಗೆಯಲ್ಲಿ ಭಾಗವಹಿಸಿದರು. ಬೆಳಿಗ್ಗೆ ದೇವಸ್ಥಾನದಲ್ಲಿ ಗಣಹೋಮ ಹಾಗೂ ಉಗ್ರಾಣ ಮುಹೂರ್ತ ನಡೆಯಿತು.














