ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜು ಮತ್ತು ಮಂಗಳೂರು ವಿವಿಯ ರೆಸ್ಪಾನ್ಸಿಬಲ್ ಎಐ ಕ್ಲಸ್ಟರ್ ಇನ್ ಹೈಯರ್ ಎಜುಕೇಶನ್ ಆಂಡ್ ಕಾರ್ಡಿಫ್ ಮೆಟ್ರೋಪಾಲಿಟಿನ್ ಯೂನಿವರ್ಸಿಟಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವದ ಅಂಗವಾಗಿ ಸೈಬರ್ ಸೆಕ್ಯೂರಿಟಿ ಮತ್ತು ಕೃತಕ ಬುದ್ದಿಮತ್ತೆ ಕುರಿತಂತೆ ಕಾರ್ಡಿಫ್ ಮೆಟ್ರೋಪಾಲಿಟಿನ್ ವಿವಿ ತಜ್ಞರ ಉಪನ್ಯಾಸ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.
ಕಾರ್ಡಿಫ್ ಮೆಟ್ರೋಪಾಲಿಟಿನ್ ವಿವಿಯ ಹಿರಿಯ ಉಪನ್ಯಾಸಕಿ ಡಾ. ಲಿಖ್ವಾ ನವಾಫ್ ಮಾಹಿತಿ ಭದ್ರತೆ, ಸೈಬರ್ ಸುರಕ್ಷತೆಯ ಆಯಾಮಗಳು, ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಮಾತನಾಡಿ ಹೆಚ್ಚುತ್ತಿರುವ ಸೈಬರ್ ಬೆದರಿಕೆಗಳ ವಿರುದ್ಧ ರೋಬಸ್ಟ್ ಸಿಸ್ಟಮ್ ಗಳನ್ನು ರೂಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.
ಇನ್ನೋರ್ವ ಉಪನ್ಯಾಸಕಿ ಡಾ. ವಿಭೂಷಿಣಿ ಬೆಂಟೋತಹೆವಾ ಮಾಹಿತಿ ಭದ್ರತೆ ಕುರಿತು ತಮ್ಮ ಜ್ಞಾನವನ್ನು ಹಂಚಿಕೊಂಡರು. ಜಾಗತಿಕ ಸಂಪರ್ಕಗಳು ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಸಂಪತ್ತಿನ ರಕ್ಷಣೆಯ ಮಹತ್ವದ ಕುರಿತು ಅವರು
ಒಳನೋಟ ನೀಡಿದರು.
ಮಂಗಳೂರು ವಿವಿಯ ಪ್ರೊ. ಎ.ಎಂ.ಖಾನ್, ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್, ರಿಸರ್ಚ್ ಆಂಡ್ ಡೆವಲಪ್ಮೆಂಟ್ ಡೀನ್ ಡಾ. ಉದಯ್ ಕುಮಾರ್ ಶೆಣೈ , ಕಾರ್ಯಕ್ರಮ ಸಂಯೋಜಕರಾದ ಡಾ. ಪ್ರಹಾಸ್ ಅಮೀನ್, ಡಾ. ಹೆಚ್. ಮನೋಜ್ ಗಡಿಯಾರ್ ಮತ್ತಿತತರು ಉಪಸ್ಥಿತರಿದ್ದರು. ಮಂಗಳೂರು ವಿವಿಯ ರೆಸ್ಪಾನ್ಸಿಬಲ್ ಎಐ ಕ್ಲಸ್ಟರ್ ಹಾಗೂ ಕಾಲೇಜಿನ ಸಹಭಾಗಿತ್ವದಲ್ಲಿ ಉಪಯುಕ್ತ ತಾಂತ್ರಿಕ ವಿಚಾರಗಳ ಸರಣಿ ಉಪಸ್ಯಾಸದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.















