ಬಿ ಸಿ ರೋಡ್: :ರೋಟರಿ ಕ್ಲಬ್ ಸಿಟಿ ಅಶ್ರಯದಲ್ಲಿ ರೋಟರಿ ಕ್ರೀಡಾ ಸಂಭ್ರಮ-23-24.

Coastal Bulletin
ಬಿ ಸಿ ರೋಡ್: :ರೋಟರಿ ಕ್ಲಬ್ ಸಿಟಿ ಅಶ್ರಯದಲ್ಲಿ ರೋಟರಿ ಕ್ರೀಡಾ ಸಂಭ್ರಮ-23-24.

ಬಿ ಸಿ ರೋಡ್ :ರೋಟರಿ ಕ್ಲಬ್ ಸಿಟಿ ಅಶ್ರಯದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇವರ ನೇತೃತ್ವದಲ್ಲಿ ನ 19 ರಂದು ಜೋನಲ್ ಸ್ಪೋರ್ಟ್ಸ್ 23-24 ರೋಟರಿ ಕ್ರೀಡಾ ಸಂಭ್ರಮವು ಮೊಡಂಕಾಪು ಚರ್ಚ್ ಮೈದಾನದಲ್ಲಿ ನಡೆಯಿತು.

ಸೋಮಯಾಜಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋ ಡಾ ರಮೇಶಾನಂದ ಸೋಮಯಾಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಡಿಜಿಈ ರೋ ವಿಕ್ರಂ ದತ್ತ, ಪಿಡಿಜಿ ಪ್ರಕಾಶ್ ಕಾರಂತ್,ರೋ ರಾಘವೇಂದ್ರ ಭಟ್, ರೋ ಲಾರೆನ್ಸ್ ಗೊನ್ಸಾಲಿಸ್, ರೋ ಡಾ. ರಮೇಶ್ , ರೋ ಸತೀಶ್ ಬೋಳಾರ್, ರೋ ರಿತೇಶ್ ಬಾಳಿಗ, ರೋ ಪ್ರಕಾಶ್ ಬಾಳಿಗ, ರೋ ಸುರೇಂದ್ರ ಕಿಣಿ, ರೋ ಎ ಎಮ್ ಕುಮಾರ್, ರೋ

ಭುವನೇಶ್ ಪಚ್ಚಿನಡ್ಕ, ರೋ ಅಶ್ವಿನಿ ಕುಮಾರ್ ರೈ, ರೋ ಜಗನ್ನಾಥ ಚೌಟ, ರೋ ಜಯರಾಮ್ ರೈ, ರೋ ವಿಶ್ವಾಸ್ ಶೇನೈ, ರೋ ಮಹಮ್ಮದ್ ವಲವೂರ್, ರೋ ರವೀಂದ್ರ ದರ್ಬೆ, ರೋ ಪದ್ಮನಾಭ ರೈ, ರೋ ಸತೀಶ್ ಕುಮಾರ್ ಕೆ ಭಾಗವಹಿಸಿದರು.

ವಲಯ 4ರ 14 ಕ್ಲಬ್ ಗಳ ಸದಸ್ಯರ ಸಮ್ಮಿಲನದಿಂದ ರೋಟರಿ ಕ್ರೀಡಾ ಸಂಭ್ರಮ ನಡೆಯಿತು. ರೋಟರಿ ಸದಸ್ಯರು ಅತ್ಯಂತ ಉತ್ಸಾಹದಿಂದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ಸಂಜೆ ಸಮಾರೋಪ ಸಮಾರಂಭ ನಡೆದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Leave a Comment