ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರೋಟರಿ ಕ್ಲಬ್ ಸಿಟಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು 20ರಂದು ಬುಧವಾರ ಸಂಜೆ 6.30ರಿಂದ ಬಿಸಿ ರೋಡಿನ ರೋಟರಿ ಬಿ ಎ ಸೋಮಯಾಜಿ ಮೆಮೋರಿಯಲ್ ಹಾಲ್ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ಬಿನ ನಿಕಟಪೂರ್ವ ಗವರ್ನರ್ . ಎಂ ರಂಗನಾಥ ಭಟ್ ಪದಾಧಿಕಾರಿಗಳ ಪದಗ್ರಹಣ ವನ್ನು ನೆರವೇರಿಸಿ ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ , ವಲಯ IV ರ ಅಸಿಸ್ಟಂಟ್ ಗವರ್ನರ್ ಇಲ್ಯಸ್ ಸಂಕ್ಟಿಸ್, ವಲಯ ಲೇಫ್ಟಿನೆಂಟ್ ಕೆ ಸತೀಶ್ ಕುಮಾರ್,ರೋ. ಪದ್ಮನಾಭ ರೈ, ಆಶಾಮಣಿ ಡಿ. ರೈ, ಗಣೇಶ್ ಶೆಟ್ಟಿ, ರಜನಿ ರಂಗನಾಥ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ನ ಈ ವರ್ಷದ ಮುಖ್ಯ ದ್ಯೇಯೋದ್ದೇಶವಾದ
ವಿದ್ಯಾ ಸಿರಿ, ಜಲ ಸಿರಿ, ಆರೋಗ್ಯ ಸಿರಿ, ವನ ಸಿರಿಯ ಅಂಗವಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮತ್ತು ವಿವಿಧ ಶಾಲೆಗಳಿಗೆ ರೋಟರಿಯಿಂದ ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಮಹಿಳಾ ಸದಸ್ಯೆಯರು ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಿ, ಘೋಷಣೆಯನ್ನು ಕೂಗಿದರು.
ಜಿ.ಎಸ್ ಆರ್ ಪದ್ಮನಾಭ ರೈ ಸ್ವಾಗತಿಸಿ, ಆಶಾಮಣಿ ಡಿ. ರೈ ಧನ್ಯವಾದವಿತ್ತರು.ಶೇಷಪ್ಪ ಮಾಸ್ಟರ್ ಹಾಗೂ ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.

















