ಬಂಟ್ವಾಳ: ಜೂಜು ರಹಿತ ಸಂಪ್ರದಾಯಿಕ ಕೋಳಿ ಅಂಕ ಕ್ಕೆ ಅವಕಾಶ ನೀಡಲು ಆಗ್ರಹ. ಮಾ.24ರಂದು ಬೃಹತ್ ಸಮಾಲೋಚನೆ ಸಭೆ.

Coastal Bulletin
ಬಂಟ್ವಾಳ: ಜೂಜು ರಹಿತ ಸಂಪ್ರದಾಯಿಕ ಕೋಳಿ ಅಂಕ ಕ್ಕೆ ಅವಕಾಶ ನೀಡಲು ಆಗ್ರಹ. ಮಾ.24ರಂದು ಬೃಹತ್ ಸಮಾಲೋಚನೆ ಸಭೆ.

ಬಂಟ್ವಾಳ:ಜಿಲ್ಲೆಯಲ್ಲಿ ಸುಮಾರು 1200ವರ್ಷಗಳ ಹಿನ್ನೆಲೆ ಹೊಂದಿರುವ ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಜೂಜು ರಹಿತವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಸಾಂಪ್ರದಾಯಿಕ ಆಚರಣಾ ಹಿತ ರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ ಅಗ್ರಹಿಸಿದ್ದಾರೆ.

ಬಿ. ಸಿ. ರೋಡಿನಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ' ಈ ಬಗ್ಗೆ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಮಂದಿ ಮಾ. 24ರಂದು ಬೆಳಿಗ್ಗೆ ಗಂಟೆ 9.30ಕ್ಕೆ ವಗ್ಗ ಸಮೃದ್ಧಿ ಸಹಕಾರ ಸೌಧ ಸಭಾಂಗಣದಲ್ಲಿ ಒಟ್ಟು ಸೇರಿ ಸಮಾಲೋಚನೆ ನಡೆಸಲಾಗುವುದು ' ಎಂದರು.

ಜಿಲ್ಲೆಯ ಹಲವಾರು ದೈವಸ್ಥಾನ ಗಳಲ್ಲಿ ಕೋಳಿ ಅಂಕ ನಡೆಸುವ ಸಂಪ್ರದಾಯ ಬೆಳೆದು ಬಂದಿದೆ. ಇಲ್ಲಿ ಜೂಜು ರಹಿತ ಸಾಂಪ್ರದಾಯಿಕ ಕೋಳಿ ಅಂಕ ನಡೆಸುವುದಕ್ಕೂ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿರುವುದು

ಖಂಡನೀಯ. ಈಗಾಗಲೇ ಇಂತಹ ಸಂಪ್ರದಾಯಕ್ಕೆ ಅಡ್ಡಿಪಡಿದವರ ವಿರುದ್ದ ದೈವಗಳಿಗೆ ಸಾಮೂಹಿಕ ಪ್ರಾರ್ಥನೆ ಮೂಲಕ ದೂರಿಕೊಳ್ಳಲಾಗಿದೆ. ಕುದುರೆ ರೇಸ್, ಕಂಬಳ, ಜಲ್ಲಿಕಟ್ಟು ಬೆಂಬಲಿಸುವ ಸರ್ಕಾರ ಕೋಳಿ ಅಂಕಕ್ಕೆ ಮಾತ್ರ ಅಡ್ಡಿ ಪಡಿಸುತ್ತಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿದಂತೆ ಗೃಹಸಚಿವ ಮತ್ತು ಮುಖ್ಯಮಂತ್ರಿಗೂ ಮನವಿ ಸಲ್ಲಿಲಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೊಷ್ಟಿಯಲ್ಲಿ ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ತಿಮರೆಗುಡ್ಡೆ, ಪ್ರಮುಖರಾದ ಆನಂದ ಪೂಜಾರಿ ಕಡಬ, ಗಂಗಾಧರ ಪೂಜಾರಿ, ಹರೀಶ ದಾಸ್ ಕಾವಳಕಟ್ಟೆ ಉಪಸ್ಥಿತರಿದ್ದರು.

Leave a Comment