Coastal Bulletin

ಮೂಡಬಿದಿರೆ; ತಾನು ಕೇಳಿದಾಗ ಮೊಬೈಲ್ ಕೊಡಲಿಲ್ಲ ಎಂದು ಅಪ್ರಾಪ್ತ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ಆದಿತ್ಯವಾರ ನಡೆದಿದೆ.

ಉಮೇಶ್‌ ಪೂಜಾರಿ ಎಂಬವರ ಪುತ್ರಿ ಅಳಿಯೂರು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಆದಿತ್ಯವಾರ ಯುತಿಯ ತಾಯಿ ಮತ್ತು ತಂಗಿ ಶಿರ್ತಾಡಿಗೆ ಹೊರಟಿದ್ದರು.ಆದರೆ ಯತಿ ಹೋಗಲು ನಿರಾಕರಿಸಿದ್ದು, ಮೊಬೈಲ್‌ ಕೊಡುವಂತೆ ತಾಯಿಯಲ್ಲಿ ಹೇಳಿದ್ದಾರೆ.ಆದರೆ ತಾಯಿ ಮೊಬೈಲ್ ಈಗ

ಕೊಡುವುದಿಲ್ಲ, ಶಿರ್ತಾಡಿಯಿಂದ ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ಹೋಗಿದ್ದರು.

ಮಧ್ಯಾಹ್ನ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ.ಹುಡುಕಾಡಿದಾಗ ಸಂಜೆ 4ರ ಸುಮಾರಿಗೆ ಮನೆ ಬಳಿ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು‌.ಓದಿನಲ್ಲಿ ಪ್ರತಿಭಾನ್ವಿತೆಯಾಗಿದ್ದಳು, ಮೂಡಬಿದ್ರೆ ಪೊಲೀಸರು ಪ್ರಕರಣದ ಕೇಸು ದಾಖಲಿಸಿದ್ದಾರೆ.

Leave a Comment