Coastal Bulletin

ಬಂಟ್ವಾಳ:ಇಲ್ಲಿನ ಪುರಾಣ ಪ್ರಸಿದ್ಧ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ವಾಷರ್ಿಕ ಜಾತ್ರಾ ಮಹೋತ್ಸವವು ಸೋಮವಾರ ನಡೆದ ಮಹಾ ರಥೋತ್ಸವದ ಮೂಲಕ ಸಮಾಪನಗೊಂಡಿತು.

ಭಾನುವಾರ ಬೆಳಿಗ್ಗೆ ಚಂದ್ರ ಮಂಡಲ ಉತ್ಸವ ಪ್ರಯುಕ್ತ ದೇವರ ದರ್ಶನಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ತರಲಾಯಿತು. ಇದೇ ವೇಳೆ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ, ಪಾರ್ವತಿ-ಪರಮೇಶ್ವರ ದೇವರ ಭೇಟಿ ದೃಶ್ಯ ವೀಕ್ಷಿಸಲು ಅಪಾರ ಮಂದಿ ಸೇರಿದ್ದರು.

ಸೋಮವಾರ ಮಧ್ಯಾಹ್ನ ಗದಾತೀರ್ಥ ಕೆರೆ ಬಳಿ ಮಹಾರಥೋತ್ಸವ ಮತ್ತು ಕೊಡಮಣಿತ್ತಾಯ

ದೈವದ ನೇಮ, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು.  

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಗ್ರಾಮಣಿಗಳಾದ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಕಾವಳಮೂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಅಜಿತ್ ಶೆಟ್ಟಿ ಮತ್ತಿತರರು ಇದ್ದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭೇಟಿ ನೀಡಿದರು.

Leave a Comment