Coastal Bulletin

ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ನೇತೃತ್ವದಲ್ಲಿ,ಸ್ವಾತಂತ್ರ್ಯ ಸೇನಾನಿ ದಿವಂಗತ ಡಾ|| ಅಮ್ಮೆಂಬಲ ಬಾಳಪ್ಪರವರ ಜನ್ಮ ಶತಾಬ್ದಿ ಸಂಸ್ಕರಣೆಗಾಗಿ ಹಾಗೂ ದಿವಂಗತ ಪಿ ಸದಾನಂದ ಅತ್ತಾವರ ಇವರ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ವೇದವ್ಯಾಸ್ ಕಾಮತ್,ಮಂಗಳೂರು ಹಾಗೂ ಮಹಾನಗರ ಪಾಲಿಕೆ ಮಹಾ ಪೌರರು ಪ್ರೇಮಾನಂದ ಶೆಟ್ಟಿಯವರು ಉದ್ಘಾಟಿಸಿದರು.

ಸಭೆಯ ಅದ್ಯಕ್ಷ ಸ್ಥಾನವನ್ನು ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ದಿವಾಕರ ಪಾಂಡೆಶ್ವರ (ಮಾಜಿ ಮೇಯರ್),ಡಾಕ್ಟರ್ ಸುಧಾಕರ್ (RMO ವೆನ್‌ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ),ಡಾ|| ನವೀನ್ ಚಂದ್ರ ಕುಲಾಲ್,ಡಾ|| ಜಯ ಎನ್.ಭಟ್ (ಮೆಡಿಕಲ್ ಆಫೀಸರ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ), ಶ್ರೀ ಚಂದಪ್ಪ ಮೂಲ್ಯ( ನಿವೃತ್ತ BSF ಕಮಾಂಡೆಂಟ್)ಶ್ರೀ ರಾಜೇಂದ್ರ ಕುಮಾರ್ ( ಮಾಜಿ ಉಪಮೇಯರ್ ), ರೂಪ ಡಿ.ಬಂಗೇರ( ಮಾಜಿ ಕಾರ್ಪೊರೇಟರ್), ಸುರೇಶ್ ಕುಲಾಲ್ ( ಅದ್ಯಕ್ಷರು ಸಮಾಜ ಸೇವಾ ಸಹಕಾರಿ ಬ್ಯಾಂಕ್ (ರಿ.)ಬಂಟ್ವಾಳ), ಸಂದೀಪ್ ಎಸ್.ಪಿ( ದಿ.ಪಿ. ಸದಾನಂದ ಅತ್ತಾವರ), ಪ್ರೇಮನಂದ ಕುಲಾಲ್ ಕೋಡಿಕಲ್(

ಅದ್ಯಕ್ಷರು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ.)ಕುಲಶೇಖರ), ಪುಂಡಾರಿಕಾಕ್ಪ ಯು.( ಅದ್ಯಕ್ಷರು ಮುಡಿಪು ಕುಲಾಲ ಸಂಘ) ಚಂದ್ರಪ್ರಭಾ ಎಸ್.ಕುಲಾಲ್ ( ಕೋಶಾಧಿಕಾರಿ, ಸಂಸ್ಕಾರ ಭಾರತಿ ಮಂಗಳೂರು), ಅಜಂತ ಪಿಲಾರ್( ಉಪಾಧ್ಯಕ್ಷರು ಹಿಂದುಳಿದ ಯುವ ಮೋರ್ಚಾ ಬಿ.ಜೆ.ಪಿ), ನಾರಾಯಣ ಪೆರ್ನೆ( ಅದ್ಯಕ್ಷರು ಬಂಟ್ವಾಳ ಕುಲಾಲ ಸಂಘ) ಉಪಸ್ಥಿತಿ ಇದ್ದರು.

ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಪ್ರಾರ್ಥನೆ ಮಾಡಿದರು,ಸೇವಾದಳಪತಿ ಕಿರಣ್ ಅಟ್ಲೂರು ಸ್ವಾಗತಿಸಿದರು, ಕಾರ್ಯದರ್ಶಿ ಸದಾಶಿವ ಕುಲಾಲ್ ಧನ್ಯವಾದವಿತ್ತರು.

ವೇದಿಕೆಯಲ್ಲಿ ಸರಿ ಸೂಮರು 63 ರಕ್ತದಾನ ಮಾಡಿದ ಪವನ್ ಕುಲಾಲ್ ಮಂಕಿಸ್ಯಾಂಡ್ ಮತ್ತು ಶ್ರೀ ಕಿರಣ್ ಅಟ್ಲೂರು ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಶ್ರೀ ಪ್ರವೀಣ್ ಬಸ್ತಿ ನಿರ್ವಹಿಸಿದ್ದರು ಒಟ್ಟು 58 ಮಂದಿ ರಕ್ತದಾನ ಮಾಡಿದರು.

Leave a Comment