ಡಿವೈನ್ ಪಾರ್ಕ್ ಟ್ರಸ್ಟ್(ರಿ.) ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿವೇಕ ಜಾಗ್ರತ ಬಳಗ ಬಂಟ್ಟಾಳದ ವಿವೇಕ ಕಿರಣ ಮಂದಿರದ 14ನೇ ವರ್ಧಂತ್ಯುತ್ಸವವು ನೆರವೇರಿತು.
ಶ್ರೀ ದುರ್ಗಾ ಕೃಪಾಂಬುಧಿ ಎಂಬ ವಿಶಿಷ್ಠ ಸಾಮೂಹಿಕ ದುರ್ಗಾ ಪೂಜೆಯು ಸುಮಾರು 1000 ಭಕ್ತರ ಉಪಸ್ಥಿತಿಯಲ್ಲಿ ಕಡಂದಲೆಯ ವಿದ್ವಾನ್ ವೇದ ಮೂರ್ತಿ ಶ್ರೀ ಸ್ಕಂದ ಪ್ರಸಾದ ಭಟ್ಟರ ಪೌರೋಹಿತ್ಯದೊಂದಿಗೆ ನೆರವೇರಿತು. ಅನಂತರ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ಡಿವೈನ್ ಪಾರ್ಕ್ ನ ಪದಾಧಿಕಾರಿಗಳಾದ ಯಶವಂತ ಡಿ.ಎಸ್. ಇವರು ವಹಿಸಿ ಕೊಂಡು ಭವ್ಯ ಭಾರತದ ನಿರ್ಮಾಣದಲ್ಲಿ ಪ್ರತಿ ಮನೆಯಲ್ಲಿ ಕೂಡಾ ಸದ್ವಿಚಾರ, ಸಂಸ್ಕಾರಗಳನ್ನು ಕೊಡುವ ಧರ್ಮ ಶಿಕ್ಷಣ ಅಗತ್ಯತೆಯನ್ನು ತಿಳಿ ಹೇಳಿ ಈ ಸಂಘಟನೆಯ ಕಾರ್ಯಕ್ಕೆ ಅಭಿನಂದಿಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪ್ರಶಾಂತಿ ಸದ್ಬಾವನಾ ಟ್ರಸ್ಟ್ ನ ಅಧ್ಯಕ್ಷರಾದ ಮಧುಸೂದನ ನಾಯಕ್ ಪುತ್ತೂರು ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕಾರ್ಯಕ್ರಮದಲ್ಲಿ ಆಧಾತ್ಮಿಕ ಸಂಸ್ಥೆಯ ಪಾತ್ರ ಮಹತ್ವಗಳನ್ನು ತಿಳಿ ಹೇಳಿದರು.
ಬಂಟ್ಟಾಳದ ವಿವೇಕ ಕಿರಣ ಮಂದಿರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಗಮಿಸಿ ಶುಭ ಹಾರೈಸಿದರು. ವರ್ಧಂತಿ ಮಹೋತ್ಸವ ದ ಹಿನ್ನೆಲೆಯಲ್ಲಿ 7 ದಿನಗಳ ಕಾಲ ಪ್ರವಚನಗೈದ ವಿದ್ವಾನ್ ಕೆ. ಆರ್. ಶಶಾಂಕ ಭಟ್
ನಾಲ್ಕೂರು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಿ.ಡಾ.ಬಿ.ಎನ್ ಮಹಾಬಲ ಶೆಟ್ಟಿ, ಪನ್ನೆ ಗುತ್ತು ಬೆಳ್ಳಾರೆ ಇವರ ಸ್ಮರಣಾರ್ಥಾ ಶ್ರೀರಾಮಕೃಷ್ಣ ವಿಕಸನ ಕೇಂದ್ರ ಬೆಳ್ಳಾರೆ ಇವರು ಕೊಡಮಾಡುವ ಅಭ್ಯಾಸಾದರ್ಶ ಪ್ರಶಸ್ತಿಯನ್ನು ಕಲಿಕೆಯಲ್ಲಿ ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ನೀಡಲಾಯಿತು. ನಗದು, ಪ್ರಶಸ್ತಿ ಪತ್ರ ಇರುವ ಈ ಪ್ರಶಸ್ತಿಯನ್ನು ಕಡೇಶಿವಾಲಯ ಅಮೈಯ ಇಂಜಿನಿಯರಿಂಗ್ ವಿದ್ಯಾರ್ಥಿ ವಿವೇಕಾನಂದ ಹಾಗೂ ವಿದ್ಯಾರ್ಥಿನಿ ಭಾಗ್ಯಶ್ರೀ ಕುರಿಯಾಳ ಇವರು ಪಡೆದರು.
ಕಾರ್ಯಕ್ರಮದಲ್ಲಿ ಆಸೀನರಾಗಿದ್ದ ಸ್ಕಂದ ಪ್ರಸಾದ್ ಭಟ್ ಕಡಂದಲೆ ಇವರು ಶುಭಾಂಶಸನೆಗೈದರು. ಈ ಸಂದರ್ಭದಲ್ಲಿ ಬಂಟ್ಟಾಳ ಬಳಗದ ಅಧ್ಯಕ್ಷರಾದ ನಾಗೇಶ ರೈ ವೇದಿಕೆಯಲ್ಲಿ ಉತಸ್ಥಿತರಿದ್ದರು.
ಕಾರ್ಯಕ್ರಮನ್ನು ಆ ಶಿವರಾಜ್ ಅಂತರ ನಿರೂಪಿಸಿ, ಶ್ರೀ ಗಿರೀಶ ಹೆಗಡೆಯವರು ಸ್ವಾಗತಿಸಿ, ಶ್ರೀಮತಿ ರಶ್ಮಿತಾ ರಾಘವೇಂದ್ರ ಪೈ ವಂದಿಸಿದರು. ಅನಂತರದಲ್ಲಿ ಮಕ್ಕಳ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ನರಕಾಸುರ ಮೋಕ್ಷ – ಮೈಂದ ದ್ವಿವಿಧ ಕಾಳಗವು ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಭಜನಾ ಮಂಡಳಿ. ನಂದಾವರ ಇವರಿಂದ ಭಜನೆ ಸೇವೆ ನಡೆಯಿತು.














