ಬಿ ಸಿ ರೋಡ್ :“ತುಳುವೆರೆನ ತುಳುನಾಡ ಸಂತೆ” 3 ದಿನಗಳ ಕೃಷಿಗೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಕೆ ಚಾಲನೆ.

Coastal Bulletin
ಬಿ ಸಿ ರೋಡ್ :“ತುಳುವೆರೆನ ತುಳುನಾಡ ಸಂತೆ” 3 ದಿನಗಳ ಕೃಷಿಗೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಕೆ ಚಾಲನೆ.

ಬಂಟ್ವಾಳ :ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಜೂ 20ರಿಂದ 22ರ ವರೆಗೆ ನಡೆಯುವ “ತುಳುವೆರೆನ ತುಳುನಾಡ ಸಂತೆ” ಕುಕ್ಕು ಪೆಲಕಾಯಿದ ಒಟ್ಟು ತುಳು ಸಾಹಿತ್ಯ ಸಾಂಸ್ಕೃತಿಕ ರಂಗ್ ಎಂಬ ಕೃಷಿಗೆ, ಸಾಹಿತ್ಯ, ಸಾಂಸ್ಕೃತಿಕ ಸಮ್ಮಿಲನದ ಕಾರ್ಯಕ್ರಮವು ಜೂ 20ರಂದು ಶುಕ್ರವಾರ ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಉದ್ಘಾಟನೆಗೊಂಡಿತು.

ತುಳುನಾಡ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಧ್ಯವರ್ತಿಗಳಿಲ್ಲದೆ ಕೃಷಿಕರ ಉತ್ಪನ್ನಗಳಿಗೆ ಸಂತೆಯು ನೇರ ಮಾರುಕಟ್ಟೆಯಾಗಿದ್ದು ತುಳುವರು ಮಳೆಗಾಲದಲ್ಲಿ ಕೃಷಿಕ ಚಟುವಟಿಕೆಗಳಲ್ಲಿ ತೊಡಗುದರಿಂದ ಸಂತೆಯಲ್ಲಿ ಭಾಗಿಯಾಗುವವರು ಕಡಿಮೆಯಾಗಿದ್ದಾರೆ.ಪ್ರಸ್ತುತ ಕಾಲದಲ್ಲಿ ತುಳುನಾಡ ಸಂತೆಯ ಅನಿವಾರ್ಯತೆ ಇದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಚಾಲನೆ ನೀಡಿ ಬಳಿಕ ‌ಮಾತನಾಡಿದ ಉಡುಪಿ ಕಾಸರಗೋಡು ಸೇರಿದಂತೆ ತುಳು ಭಾಷೆ ಮಾತನಾಡುವ ಜನರಿಗೆ ಪ್ರತ್ಯೇಕ ತುಳು ರಾಜ್ಯದ ಸ್ಥಾನಮಾನ ಸಿಗಲಿ ಎಂದು ಅಪೇಕ್ಷೆ ವ್ಯಕ್ತಪಡಿಸಿದರು ಹಾಗೂ ಮಾರುಕಟ್ಟೆಯಲ್ಲಿ

ಹಲಸು ಹಾಗೂ ಮಾವಿನ ಹಣ್ಣಿಗೆ ಬಹಳ ಬೇಡಿಕೆ ಇದ್ದು ಅನೇಕ ರುಚಿಕರವಾದ ಖಾದ್ಯದೊಂದಿಗೆ ಅರೋಗ್ಯವನ್ನು ಕಾಪಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತುಳು ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ತೃಪ್ತಿ ,ರಮ್ಯಶ್ರೀ, ಯಶಸ್ವಿನಿ ಲತೇಶ್ ಬಿ‌. ವಿದ್ಯಾರ್ಥಿಗಳಿಗೆ ಗೌರವ ನೀಡಿ ಗೌರವಿಸಲಾಯಿತು.ತುಳು ಶಿಕ್ಷಕರಾದ ರಮೇಶ್‌ ಬಿ.ಕೆ.ಗೇರುಕಟ್ಟೆ ಅವರನ್ನು ‌ಗೌರವಿಸಿದರು.

ಪ್ರಮುಖರಾದ ಎ.ಸಿ.ಭಂಡಾರಿ, ಪಿಯೂಸ್ ಎಲ್ ರೋಡ್ರಿಗಸ್, ರವೀಂದ್ರ ಕಂಬಳಿ, ಅಶ್ವನಿಕುಮಾರ್ ರೈ, ಸತೀಶ್ ಭಂಡಾರಿ ಕುಳತ್ತಬೆಟ್ಟು,ಗೀತಾ ಲಕ್ಷ್ಮೀಶ್, ಸುಭಾಶ್ಚಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ಸುಕುಮಾರ್ ಬಂಟ್ವಾಳ್ ಧನ್ಯತ್ವದವಿತ್ತು, ಹೆಚ್ ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.

Leave a Comment