ಬಿ ಸಿ ರೋಡ್ :ಪತ್ತನಾಜೆ ಜಾನಪದ ಹಬ್ಬದ ಉದ್ಘಾಟನಾ ಸಮಾರಂಭ. ಜಾತಿ ಧರ್ಮವನ್ನು ಮೀರಿದ ಬದುಕು ನಮ್ಮದಾಗಬೇಕು: ಡಾ| ಜೋಗತಿ ಮಂಜಮ್ಮ.

Coastal Bulletin
ಬಿ ಸಿ ರೋಡ್ :ಪತ್ತನಾಜೆ ಜಾನಪದ ಹಬ್ಬದ ಉದ್ಘಾಟನಾ ಸಮಾರಂಭ. ಜಾತಿ ಧರ್ಮವನ್ನು ಮೀರಿದ ಬದುಕು ನಮ್ಮದಾಗಬೇಕು: ಡಾ| ಜೋಗತಿ ಮಂಜಮ್ಮ.

ಬಂಟ್ವಾಳ: ಸಮಾಜದಲ್ಲಿ ಜಾತಿ ಧರ್ಮವನ್ನು ಮೀರಿದ ಬದುಕು ನಮ್ಮದಾಗಬೇಕು, ಜಾನಪದದ ಮಹತ್ವವನ್ನು ನಾವು ಅರಿತು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಆಗಬೇಕಿದ್ದು, ಕನ್ನಡ ಶಾಲೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಿದಾಗ ಭಾಷೆಯ ಬೆಳವಣಿಗೆಯ ಜತೆಗೆ ಸಂಸ್ಕೃತಿ-ಸಂಸ್ಕಾರ ಉಳಿಯಲು ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಜೋಗತಿ ಮಂಜಮ್ಮ ಹೇಳಿದರು

ಅವರು ಕರ್ನಾಟಕ ಜಾನಪದ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ಅಶ್ರಯದಲ್ಲಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಪತ್ತನಾಜೆ ಜಾನಪದ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ತನಾಜೆಯ ಕುರಿತು ವಿಶೇಷ ಉಪನ್ಯಾಸ ನೀಡಿದ ಉಜಿರೆ ಎಸ್‌ಡಿಎಂ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ದಿವಾ ಕೊಕ್ಕಡ ಅವರು ಮಾತನಾಡಿ, ಜಾನಪದದ ಜ್ಞಾನ ನಮಗೆ ಅಗತ್ಯ ,ತುಳುನಾಡಿನ ಸಂಸ್ಕೃತಿ, ಆಚರಣೆಗೆ ವಿಶೇಷ ಮಹತ್ವವಿದೆ, ಹಬ್ಬ ಹರಿದಿನಗಳು ಕಳೆದು ಮಳೆಗಾಲಕ್ಕೆ ಅಣಿಯಾಗುವ ಸಮಯ ಪತ್ತನಾಜೆ ಜನಜೀವನಕ್ಕೆ ಒಂದು ರೀತಿಯ ಗಡುವು ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಪೊಳಲಿ ದೇವಸ್ಥಾನದ ಪ್ರಧಾನ ಅರ್ಚಕ ಪಿ.ರಾಮ ಭಟ್, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ

ಅಧ್ಯಕ್ಷ ಪ್ರೊ| ತುಕರಾಮ್ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಜಿಲ್ಲಾ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜೇಶ್ , ಬಂಟ್ವಾಳ ಪುರಸಭಾ ಮಾಜಿ ಉಪಾಧ್ಯಕ್ಷೆ ಯಾಸ್ಮಿನ್ ಹಾಮದ್, ಸೇವ್‌ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್ ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷೆ ಪ್ರಮೀಳಾ ಮಾಣೂರು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಅಕ್ಬರ್ ಆಲಿ ಅವರು ಸಮ್ಮಾನ ಪತ್ರ ವಾಚಿಸಿದರು. ಗೌರವ ಸಲಹೆಗಾರ ಅನಿಲ್ ಪಂಡಿತ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಕೆ.ನೈನಾಡು ಕಾರ್ಯಕ್ರಮ ನಿರೂಪಿಸಿದರು.ಸದಾಶಿವ ಡಿ ತುಂಬೆ, ಗೋಪಾಲ ಅಂಚನ್ ಸಹಕರಿಸಿದರು.

Leave a Comment