ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ : ದೇವೇಗೌಡರ ಜೀವಕ್ಕೆ ಹಾನಿತರುವುದು ಡಿಕೆಶಿ ಮೂಲ ಉದ್ದೇಶ- ಜೆಡಿಎಸ್ ಆರೋಪ.

Coastal Bulletin
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ : ದೇವೇಗೌಡರ ಜೀವಕ್ಕೆ ಹಾನಿತರುವುದು ಡಿಕೆಶಿ ಮೂಲ ಉದ್ದೇಶ- ಜೆಡಿಎಸ್ ಆರೋಪ.

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್‌ಡ್ರೈವ್ ಹಂಚಿಕೆ ಕುರಿತು, ಜೆಡಿಎಸ್ ಪಕ್ಷ ರಾಜ್ಯ ಕಾಂಗ್ರೆಸ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದಿದೆ. ಕಾಂಗ್ರೆಸ್‌ನ ಅಸಲಿ ಮುಖ ಕಳಚಿ ಬಿದ್ದಿದೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ಜೆಡಿಎಸ್ ದೂರಿದೆ.

ಹೊಂಚು ಹಾಕಿ ಸಂಚು ಮಾಡುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಹೌದಲ್ಲವೇ ಕಾಂಗ್ರೆಸ್ಸಿಗರೇ? ಸತ್ಯ ನಿಮ್ಮ ಮುಂದೆಯೇ ಇದೆ. ನಿಮ್ಮ ಅಧ್ಯಕ್ಷರೇ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. CDಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್ ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲಾ.

ಬಿಜೆಪಿಯ ದೇವರಾಜೇಗೌಡರ ಹೇಳಿಕೆಯ ನಂತರ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ. ಈಗ ಹೇಳಿ, ಯಾರು ಮೆಂಟಲ್? ಎಂದು ಜೆಡಿಎಸ್

ಪ್ರಶ್ನಿಸಿದೆ. ಮಾತಿನುದ್ದಕ್ಕೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.

ಇಲ್ಲಿವೆ CDಶಿವಕುಮಾರ್ ಗ್ಯಾಂಗಿನ ಸಂಚುಗಳನ್ನು ಜೆಡಿಎಸ್ ಪಟ್ಟಿ ಮಾಡಿದೆ.ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಖ್ಯಾತಿ ತರುವುದು.ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡುವುದು.

ಜನತಾ ದಳ (ಜಾತ್ಯಾತೀತ) ಮತ್ತು ಕರ್ನಾಟಕ ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಬೀಳುವಂತೆ ಮಾಡುವುದು.ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರ ಜೀವವನ್ನು ಬಲಿ ಪಡೆಯುವುದು.

ಈ ಎಲ್ಲಾ ಸಂಚುಗಳ ಜಾರಿಗೆ CDಶಿವಕುಮಾರ್ ಸ್ಲೀಪರ್ ಸೆಲ್ ನ ಟೂಲ್ ಕಿಟ್ ವ್ಯವಹಾರ ಇದೆ ಎಂದು ಜೆಡಿಎಸ್ ಆರೋಪಿಸಿದೆ.

Leave a Comment