ಮಾಣಿ: ಗ್ರಾ ಪಂ ನಲ್ಲಿ ಎರಡು ದಿನಗಳ ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರ. ಆಧಾರ್ ಕಾರ್ಡ್ ಜೀವನಕ್ಕೆ ಆಧಾರ:.ರಾಜೇಶ್ ಕುಮಾರ್

Coastal Bulletin
ಮಾಣಿ: ಗ್ರಾ ಪಂ ನಲ್ಲಿ ಎರಡು ದಿನಗಳ ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರ. ಆಧಾರ್ ಕಾರ್ಡ್ ಜೀವನಕ್ಕೆ ಆಧಾರ:.ರಾಜೇಶ್ ಕುಮಾರ್

ಬಂಟ್ವಾಳ: ಆಧಾರ್ ಕಾರ್ಡ್ ಜೀವನಕ್ಕೆ‌ ಆಧಾರ. ಸರಿಯಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಹತ್ತು ವರ್ಷಗಳಿಗೊಮ್ಮೆ ಸರಿಯಾದ ಮೂಲ ದಾಖಲೆಗಳನ್ನು ಒದಗಿಸಿ ನವೀಕರಿಸಿಕೊಳ್ಳಬೇಕೆಂದು ಅಂಚೆ ಇಲಾಖಾಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.

ಅವರು ಮಾಣಿ ಗ್ರಾಮ ಪಂಚಾಯತ್ ಮತ್ತು ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಜಂಟಿ ಆಶ್ರಯದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಧಾರ ಕಾರ್ಡ್ ತಿದ್ದುಪಡಿ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧಾರ್  ಕಾರ್ಡ್ ನವೀಕರಣ ,ತಿದ್ದುಪಡಿಗೆ ಅನುಕೂಲವಾಗಲೆಂದು ಅಂಚೆ ಇಲಾಖೆಯ ಸಹಕಾರದೊಂದಿಗೆ

ಎರಡು ದಿನಗಳ ಶಿಬಿರ ಏರ್ಪಡಿಸಲಾಗಿದೆ.ಸಾರ್ವಜನಿಕರು ಮುಂಚಿತವಾಗಿ ಟೋಕನ್ ಪಡೆದುಕೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್,ನಾರಾಯಣ ಶೆಟ್ಟಿ ತೋಟ, ಪ್ರೀತಿ ಡಿನ್ನಾ ಪಿರೇರಾ,ರಮಣಿ ಡಿ.ಪೂಜಾರಿ,ಅಂಚೆ ಇಲಾಖೆಯ ಸುಸ್ಮಿತಾ ರೈ ಇದ್ದರು.

ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ಪ್ರಸ್ತಾವನೆ ಗೈದರು. ನೂತನ್ ಬಂಗೇರ ಮಾಹಿತಿ ನೀಡಿ ವಂದಿಸಿದರು.

Leave a Comment