ಫರಂಗಿಪೇಟೆ:41ನೇ ವರ್ಷದ "ಫರಂಗಿಪೇಟೆ ಗಣೇಶೋತ್ಸವ"ಕ್ಕೆ ಚಾಲನೆ. ತೆನೆ ವಿತರಣೆ.

Coastal Bulletin
ಫರಂಗಿಪೇಟೆ:41ನೇ ವರ್ಷದ "ಫರಂಗಿಪೇಟೆ ಗಣೇಶೋತ್ಸವ"ಕ್ಕೆ ಚಾಲನೆ. ತೆನೆ ವಿತರಣೆ.

ಬಂಟ್ವಾಳ :ಸನಾತನ ಧರ್ಮ,ಪ್ರಕೃತಿಯನ್ನು ಆರಾಧಿಸುವ ಜತೆಗೆ ಸಕಲರನ್ನು ಗೌರವಿಸುವ ಗುಣ, ಪ್ರತಿ ಹಬ್ಬ ಮತ್ತು ಆಚರಣೆಗಳಲ್ಲಿ ವಿಶೇಷ ಅರ್ಥ ವಿರುತ್ತದೆ ಎಂದು ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ರವರು ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯ ದಲ್ಲಿ 3ದಿನಗಳ ಕಾಲ ನಡೆಯುವ 41 ನೇ ವರ್ಷದ ಫರಂಗಿಪೇಟೆ ಗಣೇಶೋತ್ಸವ ಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ನಿಟ್ಟೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ ಸತೀಶ್ ಭಂಡಾರಿ ಯವರು ಧ್ವಜಾರೋಹಣ ಗೈದರು. ವೇದಿಕೆಯಲ್ಲಿ ಮನಸ್ವಿನಿ ಆಸ್ಪತ್ರೆ ಯ ಮನೋವೈದ್ಯರಾದ ಡಾ ರವೀಶ್ ತುಂಗಾ , ಮಹತೋಬಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಇಲ್ಲಿನ ಆಡಳಿತ ಮೊಕ್ತೇಸರರಾದ ಎಂ ಕುಲದೀಪ ಚೌಟರ ಅರಮನೆ ,ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ ಪೂಂಜಾ , ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೋಶಾಧಿಕಾರಿ ಕೆ ರವೀಂದ್ರ ಕಂಬಳಿ , ಉತ್ಸವ ಸಮಿತಿ ಅಧ್ಯಕ್ಷರಾದ ಕೇಶವ ದೋಟ ಮೇರಮಜಲು , ಕಾರ್ಯದರ್ಶಿ ದಿನೇಶ್ ತುಂಬೆ , ದಾಮೋದರ ಶೆಣೈ ಸಹಿತ ಪದಾಧಿಕಾರಿಗಳು ಭಗವದ್ಭಾಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತೆನೆ ವಿತರಿಸಲಾಯಿತು. ಸೇವಾಂಜಲಿ ಸಭಾಂಗಣ ದಲ್ಲಿ ನೂತನ ವಾಗಿ ನಿರ್ಮಾಣ ವಾದ ಭೋಜನ ಶಾಲೆ ಕಟ್ಟಡದ ಎಂಜಿನಿಯರ್ ಅರ್ಜುನ್ ಪೂಂಜಾರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ತಾರಾನಾಥ ಕೊಟ್ಟಾರಿ ಯವರು ಸ್ವಾಗತಿಸಿದರು.ದೇವದಾಸ್ ಶೆಟ್ಟಿ ಕೊಡ್ಮನ್ ರವರು ವಂದಿಸಿದರು

Leave a Comment