ಬಿ ಸಿ ರೋಡ್ :ಜೂ. 22ರಂದು ಚಿಣ್ಣರಲೋಕ ಸೇವಾ ಬಂಧು (ರಿ )ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.)ಅಶ್ರಯದಲ್ಲಿ"ಶೈಕ್ಷಣಿಕ ಸಂಭ್ರಮ -2025" ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ,ಉಚಿತ ಪುಸ್ತಕ ವಿತರಣೆ, ನೃತ್ಯ ಸಿಂಚನ, ನಾಟಕ

Coastal Bulletin
ಬಿ ಸಿ ರೋಡ್ :ಜೂ. 22ರಂದು ಚಿಣ್ಣರಲೋಕ ಸೇವಾ ಬಂಧು (ರಿ )ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.)ಅಶ್ರಯದಲ್ಲಿ"ಶೈಕ್ಷಣಿಕ ಸಂಭ್ರಮ -2025" ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ,ಉಚಿತ ಪುಸ್ತಕ ವಿತರಣೆ, ನೃತ್ಯ ಸಿಂಚನ, ನಾಟಕ

ಬಂಟ್ವಾಳ: ಯಕ್ಷಗಾನ ಭರತನಾಟ್ಯ, ಸಂಗೀತ, ಜಾನಪದ ನೃತ್ಯ, ಚಿತ್ರಕಲೆ, ನಾಟಕ ತರಬೇತಿ ಮುಂತಾದ ಕಲಾ ಸಂಘಟನೆಯಾದ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಅಶ್ರಯದಲ್ಲಿ "ಶೈಕ್ಷಣಿಕ ಸಂಭ್ರಮ -2025"ಕಾರ್ಯಕ್ರಮವು ಜೂ.22ನೇ ಆದಿತ್ಯವಾರ ಸಂಜೆ 4-30ಯಿಂದ ಸ್ಪರ್ಶಾ ಕಲಾ ಮಂದಿರ ಬಿ ಸಿ ರೋಡ್ ನಲ್ಲಿ ನಡೆಯಲಿದೆ ಎಂದು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು . ಅವರು ಜೂ 19ರಂದು ಸಂಜೆ ಬಿ ಸಿ ರೋಡ್ ನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ನ ಕಾರ್ಯಕ್ಷೇತ್ರದ ಸಾಧನೆಯನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಬಂಟ್ವಾಳ ತಾಲೂಕಿನಲ್ಲಿ ಪ್ರತೀ ವರ್ಷ ಕರಾವಳಿ ಕಲೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.


ಕಳೆದ 4 ವರ್ಷಗಳಿಂದ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ನರಿಕೊಂಬು ಗ್ರಾಮ ಇಲ್ಲಿಯ ಸರಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಮುನ್ನಡೆಸುತ್ತಿದ್ದೇವೆ ಎಂದು ಹೇಳಿದರು.

ಆಡಳಿತ ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮದ

ಬಗ್ಗೆ ಮಾತನಾಡಿ, ಶೈಕ್ಷಣಿಕ ಸಂಭ್ರಮ -2025 ಎಂಬ ಶೀರ್ಷಿಕೆಯೊಂದಿಗೆ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ. ವಿದ್ಯಾರ್ಥಿ ವೇತನ ಹಾಗೂ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಭಾ ಕಾರ್ಯಕ್ರಮದೊಂದಿಗೆ ಹಮ್ಮಿ ಕೊಂಡಿದ್ದು ಬಳಿಕ ಮಕ್ಕಳ ನೃತ್ಯ ಸಿಂಚನ ಹಾಗೂ ಮೋಕೆದ ಕಲಾವಿದೆರ್ (ರಿ.) ಬಂಟ್ವಾಳ ತಂಡದ ತೆಲಿಪುವರಾ ಅತ್ತ್ ಬುಲಿಪುವರಾ..."ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಇಬ್ರಾಹಿಂ ಕೈಲಾರ್ ರಾಮಕೃಷ್ಣ ರಾವ್, ಶೋಭಾ ಶೆಟ್ಟಿ ಉಪಸ್ಥಿತರಿದ್ದರು.

Leave a Comment