breaking news

ಕಡೆಗೋಳಿ :ಪುದು ಮಹಾ ಶಕ್ತಿ ಕೇಂದ್ರದ ವತಿಯಿಂದ ಚುನಾವಣಾ ಪ್ರಚಾರ ಸಭೆ. ರಾಮರಾಜ್ಯಕ್ಕಾಗಿ ಮೋದಿಯವರ ಕೈ ಬಳಪಡಿಸಬೇಕಿದೆ :ನಾಗರಾಜ ಶೆಟ್ಟಿ

Coastal Bulletin
ಕಡೆಗೋಳಿ :ಪುದು ಮಹಾ ಶಕ್ತಿ ಕೇಂದ್ರದ ವತಿಯಿಂದ ಚುನಾವಣಾ ಪ್ರಚಾರ ಸಭೆ. ರಾಮರಾಜ್ಯಕ್ಕಾಗಿ ಮೋದಿಯವರ ಕೈ ಬಳಪಡಿಸಬೇಕಿದೆ :ನಾಗರಾಜ ಶೆಟ್ಟಿ

ಬಂಟ್ವಾಳ :ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ಪುದು ಮಹಾ ಶಕ್ತಿ ಕೇಂದ್ರದಿಂದ ವತಿಯಿಂದ ಬಾ ಜ ಪಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಚುನಾವಣಾ ಪ್ರಚಾರ ಸಭೆಯು ಎ.19ರಂದು ಕಡೆಗೋಳಿ ಕೊರಗಜ್ಜನ ಕಟ್ಟೆ ಬಳಿ ನಡೆಯಿತು.

ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಪರಿಸ್ಥಿತಿ ಅಧೋಗತಿಗೆ ಬಂದಿದೆ , ಕಾರ್ಯಕರ್ತರು ಇಲ್ಲದೆ ಸೊರಗುತ್ತಿದೆ, ಮುಂದೆ ಲೋಕಸಭಾ ಚುನಾವಣೆಯ ನಂತರ ರಾಜ್ಯ ಸರ್ಕಾರ ಪತನವಾಗಲಿದೆ, ಆದರೆ ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಹಿಂದುತ್ವ ಆಧಾರದಲ್ಲಿ ದೇಶ ಮುಂದುವರಿಯಬೇಕೆಂದು ನಿಶ್ವಾರ್ಥದಿಂದ ಹಣ ಅಧಿಕಾರದ ಅಸೆ ಇಲ್ಲದೆ ದುಡಿಯುತ್ತಿದ್ದಾರೆ ಎಂದು ಹೇಳಿದರು.ಈ ದೇಶ ಜಗತ್ತಿಗೆ ಮಾದರಿಯಾಗಬೇಕು, ದೇಶದ ಬಡ ಜನರ ಏಳಿಗೆಯಾಗ ಬೇಕು, ದೇಶ ರಾಮರಾಜ್ಯವಾಗ ಬೇಕು ಎಂದು ಮೋದಿಯವರ ಕನಸು ನನಸು ಮಾಡುವ ಪ್ರಯತ್ನಕ್ಕೆ ನಾವೆಲ್ಲ ಧ್ವನಿಯಾಗಬೇಕು, ಇಂದು ಇಡೀ ಜಗತ್ತು ಮೋದಿಯನ್ನು ಕೊಂಡಾಡುತ್ತದೆ ದೇವರಂತ ಮನುಷ್ಯ ಮೋದಿ. ಅವರ ಕೈ ಬಳಪಡಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ದೇಶ ಉಳಿದರೆ ನಮ್ಮ ಉಳಿವು ಆದ್ದರಿಂದ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಈ ಚುನಾವಣೆ ದೇಶದ ಉಳಿವಿನ

ಹೋರಾಟ, ದೇಶ ಧರ್ಮದ ಉಳಿವಿಗಾಗಿ ಜಾತಿ ಮತ ಬೇದವಿಲ್ಲದೆ ದೇಶದ ರಕ್ಷಣೆಗಾಗಿ ಹಾಗೂ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಮಾಡಲು ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಕುವೈತಬೈಲು ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.,ಪ್ರ. ಕಾರ್ಯದರ್ಶಿಗಳಾದ ಸುಜಿತ್ ಮಾಡೂರ್, ದಯಾನಂದ ತೊಕ್ಕೊಟ್ಟು, ಪುದು ಮಂಡಲ ಪ್ರಭಾರಿ ದಿನೇಶ್ ಅಂಟೂರು ,ಪುದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ್ ಸಾಲ್ಯಾನ್ ತುಂಬೆ, ಹಿಂದುಳಿದ ಮೋರ್ಚಾದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಮೇರಾಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಕ್ ಕೊಡ್ಮಾನ್ ಕೊಡಿ, ಹಿರಿಯರಾದ ಭಾಸ್ಕರ್ ಚೌಟ, ಕುಮ್ದೇಲ್, ಮಂಡಲದ ಉಪಾಧ್ಯಕ್ಷ ಮನೋಜ್ ಆಚಾರ್ಯ, ಕಾರ್ಯದರ್ಶಿ ಸುಕೇಶ್ ಶೆಟ್ಟಿ ತೇವು ಮತ್ತಿತರರು ಉಪಸ್ಥಿತರಿದ್ದರು.

Leave a Comment