ಬಂಟ್ವಾಳ :ಶ್ರೀ ಕೊರಗಜ್ಜ ಸೇವಾ ಸಮಿತಿ ಕಡೆಗೋಳಿ ತುಂಬೆ-ಪುದು ಇದರ ಅಶ್ರಯದಲ್ಲಿ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಸ್ವಾಮಿ ಕೊರಗಜ್ಜ ದೈವದ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ವಾರ್ಷಿಕ ಕೋಲ ಸೇವೆಯು ಫೆ.23ನೇ ಆದಿತ್ಯವಾರ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 10-00 ರಿಂದ ಸ್ವಾಮಿ ಕೊರಗಜ್ಜ ದೈವದ ಶಿಲಾಮಯ ಮೂರ್ತಿಗೆ ದಂಪತಿಗಳಿಂದ ಪಂಚಾಮೃತ ಅಭಿಷೇಕ,ಮಧ್ಯಾಹ್ನ ಗಂಟೆ 12.30ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.ಸಂಜೆ ಗಂಟೆ
7-00ರಿಂದ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಾಮೂಹಿಕ ಅಗೇಲು ಸೇವೆ, ಪ್ರಸಾದ ವಿತರಣೆ,ರಾತ್ರಿ ಗಂಟೆ 10.30ರಿಂದ ಕೊರಗಜ್ಜ ದೈವಕ್ಕೆ ಹರಕೆಯ ಕೋಲ ಸೇವೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.














