ತುಂಬೆ :ಗ್ರಾ ಪಂ ನಲ್ಲಿ ಮಕ್ಕಳ ಗ್ರಾಮ ಸಭೆ, ಮಕ್ಕಳ ಹಕ್ಕು ಹಾಗೂ ರಕ್ಷಣೆಯ ಬಗ್ಗೆ ಮಾಹಿತಿ ಕಾರ್ಯಾಗಾರ

Coastal Bulletin
ತುಂಬೆ :ಗ್ರಾ ಪಂ ನಲ್ಲಿ ಮಕ್ಕಳ ಗ್ರಾಮ ಸಭೆ, ಮಕ್ಕಳ ಹಕ್ಕು ಹಾಗೂ ರಕ್ಷಣೆಯ ಬಗ್ಗೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಅಶ್ರಯದಲ್ಲಿ ಮಕ್ಕಳ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ಜ. 18ರಂದು ಶನಿವಾರ ನಡೆಯಿತು.

ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷರಾಗಿ ಕುನಿಲ್ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಹಮ್ದನ್ ಹಾಗೂ ಉಪಾಧ್ಯಕ್ಷರಾಗಿ ಬಿ. ಎ. ಶಾಲಾ ವಿದ್ಯಾರ್ಥಿನಿಯಾದ ಮುಜೈನ ಶಮ ಇವರು ವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಸಾಂತ್ವಾನ ಕೇಂದ್ರದ ವಿದ್ಯಾಕುಮಾರಿ ಇವರು ಮಕ್ಕಳಿಗೆ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

 ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಯಂತಿ ಕೇಶವ, ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಪಂಚಾಯತ್ ಸದಸ್ಯರಾದ

ಮಹಮ್ಮದ್ ಝಹೂರ್, ಮಹಮದ್ ಇಬ್ರಾಹಿಂ, ಜಯಂತಿ ನಾಗೇಶ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ಶಿವುಲಾಲ್ ಚೌಹಾನ್ , ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಶ್ರೀಮತಿ ಚಂದ್ರಕಲಾಜಿ ,ಪಂಚಾಯತ್ ಸಿಬ್ಬಂದಿ ವರ್ಗ ,ಬಿ ಎ. ಶಾಲೆಯ ದೈಹಿಕ ಶಿಕ್ಷಕರಾದ ಜಗದೀಶ್ ರೈ, ತುಂಬೆ ಸರಕಾರಿ ಶಾಲೆಯ ಶಿಕ್ಷಕರಾದ ದೇವಿ, ವಳವೂರು ಶಾಲೆಯ ಶಿಕ್ಷಕರಾದ ಅಸ್ಮತ್ ಕೆ ಬಾನು , ಕುನಿಲ್ ಶಾಲೆಯ ಶಿಕ್ಷಕರಾದ ಶಿಲ್ಪ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment