ಬಂಟ್ವಾಳ : ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಾಥ ಚೌಟ ಮಾಣಿ ಇವರು ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಹಲವಾರು ದೈವಸ್ಥಾನ ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ತನ್ನನು ತೊಡಗಿಸಿಕೊಂಡಿರುವ ಚೌಟರು ಧಾರ್ಮಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕ, ಸಾಮಾಜಿಕವಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು.ಪ್ರಗತಿಪರ ಕೃಷಿಕರು ಕೂಡ.
ಇತರ ಪದಾಧಿಕಾರಿಗಳು:
ಉಪಾಧ್ಯಕ್ಷರಾಗಿ ಐತಪ್ಪ
ಆಳ್ವ ಬಿಸಿರೋಡ್, ಕಾರ್ಯದರ್ಶಿಯಾಗಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿಯಾಗಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿಯಾಗಿ ಶ್ರೀವಿದ್ಯಾ ರೈ, ಬಿಸಿರೋಡ್ ಆಯ್ಕೆಯಾಗಿದ್ದಾರೆ.













