ಬಂಟ್ವಾಳ:"ಕೃಷ್ಣ ಆಯುರ್ಧಾಮ"ಕೇರಳ ಮಾದರಿಯ ಆಯುರ್ವೇದ ಚಿಕಿತ್ಸಾ ಮಳಿಗೆಯು ಎ 20ರಂದು ಆದಿತ್ಯವಾರ ಬೆಳಿಗ್ಗೆ 10ಗಂಟೆಗೆ ಬಿ ಸಿ ರೋಡ್ ಕೈಕಂಬ ಪೊಳಲಿ ದ್ವಾರದ ಬಳಿ ಶುಭಾರಂಭಗೊಳ್ಳಲಿದೆ
ಕೃಷ್ಣ ಆಯುರ್ಧಾಮದ ವಿಶೇಷತೆಗಳು:
ಸೂತಿಕಾ ರಕ್ಷಾ
(ಪ್ರಸವಾ ನಂತರದ ಪ್ಯಾಕೇಜ್)ಬಾಣಂತಿಯರ ಆರೋಗ್ಯವನ್ನು ಪೋಷಿಸಲು, ದೈಹಿಕ ಚೇತರಿಕೆಯ ಜೊತೆಗೆ ಮಾನಸಿಕ ಆರೋಗ್ಯವನ್ನು ವೃದ್ಧಿಸಲು ಮತ್ತು ಹೆರಿಗೆಯ ನಂತರ ಬರುವ ಎಲ್ಲ ರೀತಿಯ ತೊಂದರೆಗಳನ್ನು ನಿವಾರಿಸಿ ಪುನರ್ಯೌವನಗೊಳಿಸುವ ಕ್ರಮ ಅವಧಿ: 7-42 ದಿನಗಳು ಚಿಕಿತ್ಸೆಗಳು: ಅಭ್ಯಂಗ, ಸ್ಟೇದನ, ಧೂಪನ, ಧೂಮ ನಸ್ಯ, ಬಂಧನ.
ಸ್ವರ್ಣ ಪ್ರಾಶನ
ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಸ್ಮತಿ ವೃದ್ಧಿಸುವ, ಕಲಿಕೆಯ ಸವಾಲುಗಳು ಮತ್ತು ಬೆಳವಣಿಗೆಯಲ್ಲಿ ವಿಳಂಬವಿರುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾದ ಕ್ರಮ.ಕಾಲಾವಧಿ: ಪ್ರತಿ ತಿಂಗಳು ಪುಷ್ಯ ನಕ್ಷತ್ರದಂದು ನೀಡಲಾಗುತ್ತದೆ.ಫಲಾನುಭವಿಗಳ ವಯಸ್ಸು: ಹುಟ್ಟಿನಿಂದ 16 ವರ್ಷಗಳು
ವಿಶುದ್ದಿ (ಡಿಟಾಕ್ಸ್ ಪ್ಯಾಕೇಜ್)
ಶರೀರದಲ್ಲಿ ಸಂಗ್ರಹವಾದ ಪ್ರಕೋಪಿತ ದೋಷವನ್ನು ನಿರ್ಮೂಲನೆ ಮಾಡಲು, ಆಂತರಿಕ ಸಮತೋಲನವನ್ನು ಪುನಃಸ್ಥಾಪಿಸಲು ಮತ್ತು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಶರೀರದ
ಚೈತನ್ಯವನ್ನು ಪುನರುಜ್ಜಿವನಗೊಳಿಸಲು ಸಹಾಯ ಮಾಡುವ ವಿಶೇಷ ಕ್ರಮ.ಅವಧಿ: 3-7 ದಿನಗಳು ಚಿಕಿತ್ಸೆಗಳು: ಅಭ್ಯಂಗ, ಸ್ಟೇದನ, ಬಸ್ತಿ, ನಸ್ಯ, ವಿರೇಚನ, ರಕ್ತಮೋಕ್ಷನ.
ವಿಶ್ರಾಂತಿ (ಡಿಸ್ಟೆಸ್ ಪ್ಯಾಕೇಜ್)
ವಿಶ್ರಾಂತಿ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುವ ಮತ್ತು ಮಾನಸಿಕ ಒತ್ತಡ, ಆತಂಕ ಮತ್ತು ಅಧಿಕ ರಕ್ತದೊತ್ತಡವನ್ನು ನಿವಾರಿಸಲು ವಿನ್ಯಾಸಗೊಳಿಸಲಾದ ಚಿಕಿತ್ಸಾ ಕ್ರಮ.ಅವಧಿ: 3-7 ದಿನಗಳು ಚಿಕಿತ್ಸೆಗಳು: ಅಭ್ಯಂಗ, ಸ್ಟೇದನ. ಶಿರೋಧರ, ಶಿರೋಬಸ್ತಿ, ನಸ್ಯ
ಸೌಲ್ಯಹರ
(ಕೊಬ್ಬು ನಿವಾರಣಾ ಪ್ಯಾಕೇಜ್)ಚಯಾಪಚಯವನ್ನು ಸುಧಾರಿಸುವ, ದೇಹದ ಕೊಬ್ಬನ್ನು ಕಡಿಮೆ ಮಾಡುವ ಮತ್ತು ಸಮಗ್ರ ಫಿಟ್‌ನೆಸ್ ಅನ್ನು ಹೆಚ್ಚಿಸುವ ರಚನಾತ್ಮಕ ತೂಕ ನಿರ್ವಹಣಾ ಕ್ರಮ.ಅವಧಿ: 7-28 ದಿನಗಳು ಚಿಕಿತ್ಸೆಗಳು: ಉದ್ವರ್ತನ, ಅಭ್ಯಂಗ, ಸ್ಟೇದನ, ಬಸ್ತಿ, ವಿರೇಚನ.
ಅಲ್ಲದೆ ನರ ಸಂಬಧಿ ಕಾಯಿಲೆಗಳಿಗೆ ವಿಷಯ ಆಯುರ್ವೇದ ಚಿಕಿತ್ಸೆ ನೀಡರಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.














