Coastal Bulletin

ಬಂಟ್ವಾಳ: ಬಿಲ್ಲವ ಸಮುದಾಯವನ್ನು ಸಂಘಟಿಸುವ ಹಾಗೂ ಪ್ರಮುಖ ೩ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.೬ರಂದು ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೃಹತ್ ಪಾದಾಯಾತ್ರೆ ನಡೆಯಲಿದೆ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ  ಬಿಲ್ಲವ ಸಮುದಾಯದ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ರಾಜ್ಯದದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ ೭೦ ಲಕ್ಷ  ಜನರಿದ್ದಾರೆ.  ರಾಜ್ಯಸರ್ಕಾರದಲ್ಲಿ ೭ ಮಂದಿ ಶಾಸಕರು ಇಬ್ಬರು ಮಂತ್ರಿಗಳಿದ್ದರೂ ಈ ಸಮುದಾಯಕ್ಕೆ ಯಾವುದೇ ನ್ಯಾಯ ಸಿಕ್ಕಿಲ್ಲ. ಮುಂದಿನ ಚುನವಣೆಯ ವೇಳೆ ದ.ಕ. ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ರಾಜಕೀಯ ಪಕ್ಷಗಳು ತಲಾ ೪ ಸ್ಥಾನಗಳನ್ನು ಬಿಲ್ಲವ ಸಮಾಜದ ಅಭ್ಯರ್ಥಿಗಳಿಗೆ ನೀಡಬೇಕು, ಬಿಲ್ಲವರ ಮತಗಳ ಲೆಕ್ಕಚಾರದಲ್ಲಿಯೇ ಎರಡೂ ಪಕ್ಷಗಳು ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಆಗ್ರಹಿಸಿದರು.

ಕರಾವಳಿಯಲ್ಲಿ ಬಿಲ್ಲವರ ಸಂಖ್ಯೆ ಅಪಾರವಾಗಿದ್ದರೂ ಕರವಾಳಿ ಅಭಿವೃದ್ದಿ ಪ್ರಾಧಿಕಾರದಲ್ಲಿ ಬಿಲ್ಲವರಿಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಬಿಲ್ಲವರನ್ನು ಆಯ್ಕೆ ಮಾಡಿಲ್ಲ,  ಯಾವುದೇ ರಾಜ್ಯ ಸಮಿತಿಗಳಲ್ಲಿ ಬಿಲ್ಲವರನ್ನು ಸೇರಿಸಿಕೊಳ್ಳುತ್ತಿಲ್ಲ ಇದು ನಮಗೆ ಮಾಡುತ್ತಿರಉಪಸ್ಥಿತರಿದ್ದರುಾಯ ಎಂದರು. ಧರ್ಮ ರಾಜಕಾರಣಕ್ಕೆ ಪ್ರವೀಣ್ ನೆಟ್ಟಾರ್ ಸೇರಿದಂತೆ ೨೧ ಮಂದಿ ಯುವಕರು ಹತ್ಯೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಬ್ಬ ಬಿಲ್ಲವನೂ ಧರ್ಮರಾಜಕಾರಣಕ್ಕಾಗಿ ಹತ್ಯೆಯಾಗಬಾರದು ಈ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

 ಬಿಲ್ಲವ ಸಮಾಜದ ಕುಲ ಕಸುಬಾಗಿರುವ ಶೇಂದಿ ಇಳಿಸಲು ರಾಜ್ಯದ್ಯಂತ ಅನುಮತಿಯನ್ನು ನೀಡಬೇಕು, ಬಿಲ್ಲವರು ಮೀಸಲಾತಿಯಲ್ಲಿ ವಂಚಿತರಾಗಿದ್ದಾರೆ, ನಿಗಮದ ಸ್ಥಾನ ಪಡೆಯುವಲ್ಲಿ

ವಂಚಿತರಾಗಿದ್ದಾರೆ, ಕುಲ ಕಸುಬಿನಲ್ಲೂ ವಂಚಿತರಾಗಿ ಸಾವು ಬದುಕಿನ ಮಧ್ಯೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಿಗಂದೂರು ಚೌಡೇಶ್ವರೀ ದೇವಸ್ಥಾನದ ಮೇಲೆ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದ್ದು ದೇವಸ್ಥಾನವನ್ನು ಮೇಲ್ವರ್ಗದವರಿಗೆ ಒಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದರು.

 ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು  ೬೫೮ ಕಿ. ಮಿ. ಪಾದಯಾತ್ರೆಯನ್ನು ಜ.೬ರಂದು ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಆರಂಭಿಸಲಿದ್ದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿರುವ ಸಮುದಾಯದ ಮಂತ್ರಿಗಳು ಭಾಗವಹಿಸಲಿದ್ದಾರೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ಶಿವಮೊಗ್ಗದಲ್ಲಿ ೪, ಉತ್ತರಕ ಕನ್ನಡದಲ್ಲಿ ೩,  ಉಡುಪಿಯಲ್ಲಿ ೩,  ಮಂಗಳೂರಿನಲ್ಲಿ ೪ ಸ್ಥಾನ ನೀಡಬೇಕು ಇದು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕನ್ನು ಕೇಳುತ್ತಿದ್ದೇವೆ. ಇನ್ನು ಈ ಅನ್ಯಾಯವನ್ನು ಸಹಿಸುವುದಿಲ್ಲ. ಜ.೬ರಂದು ನಡೆಯುವ ಪಾದಾಯಾತ್ರೆ ಕಾರ್ಯಕ್ರಮದಲ್ಲಿ ಮಂಗಲೂರು ಜಿಲ್ಲೆಯ ಸಮಸ್ತ ಬಿಲ್ಲವ ಸಮುದಾಯದವರು ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಮುದಾಯದ ಪ್ರಮುಖರಾದ ಕೆ. ಸಂಜೀವ ಪೂಜಾರಿ, ಶಂಕರ್ ಸುವರ್ಣ, ನವೀನ್ ಕೋಟ್ಯಾನ್, ವಾಸು ಪೂಜಾರಿ, ಜಗದೀಶ್ ಕೊಯಿಲ, ಜಯಂತಿ ಪೂಜಾರಿ, ಲೋಕೇಶ್ ಸುವರ್ಣ ಅಲೆತ್ತೂರು, ಶ್ರೀಧರ ಅಮೀನ್, ಪ್ರೇಮನಾಥ ಕೆ., ಪ್ರಶಾಂತ್ ಕೋಟ್ಯಾನ್,  ಸುಂದರ ಪೂಜಾರಿ, ಸತೀಶ್ ಬಾಯಿಲ, ನಾಗೇಶ್ ಪೂಜಾರಿ, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Leave a Comment