Coastal Bulletin

ಬಂಟ್ವಾಳ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಡಿ‌.16 ರಂದು ಕಳ್ಳಿಗೆ ಗ್ರಾಮ ದೇವಂದಬೆಟ್ಟು ಎಂಬಲ್ಲಿ ನಡೆದಿದೆ.

ದೇವಂದಬೆಟ್ಟು ಸುಂದರಿ, ಶುಭ ಆನಂದ ಬಂಜನ್ ಎಂಬವರಿಗೆ ಸೇರಿರುವ ಹಂಚಿನ ಹಳೆಯ ಮನೆಗೆ ರಾತ್ರಿ ಸುಮಾರು 10.15 ಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು , ಸುಮಾರು 6 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಬಹುದು ಎಂದು ಅಂದಾಜಿಲಾಗಿದೆ.

ಮೌಲ್ಯಯುತವಾದ ಹಳೆಯ ಶೈಲಿಯ

ಮನೆಗೆ ಬೆಂಕಿ ತಗುಲಿದ್ದು, ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಯವರು ಆಗಮಿಸಿ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದು, ಕಾರ್ಯಾಚರಣೆಯಲ್ಲಿ ಪ್ರಭಾರ ಅಧಿಕಾರಿ ಪುರುಷೋತ್ತಮ ,ರೋಹಿತ್, ಪ್ರಸಾದ್, ಗ್ರೃಹ ಸಿಬ್ಬಂದಿ ಜಯಗಣೇಶ್ ಚಾಲಕ ಕಿರಣ್ ಕುಮಾರ್ ರವರು ಭಾಗವಹಿಸಿದ್ದರು.

Leave a Comment