ಬಂಟ್ವಾಳ :ಡಿ.16.ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ - 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ" ಜಲ್ ಜೀವನ್ ಮಿಷನ್ "ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೀರಿನ ಗುಣಮಟ್ಟ ಪರೀಕ್ಷಾ ತರಭೇತಿಯ ಜೊತೆಗೆ ಶುದ್ದ ಜಲದಿಂದ ಸುರಕ್ಷತೆ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ತರಬೇತಿಯಲ್ಲಿ ಮಂಗಳೂರು ಜಿಲ್ಲಾ ಪ್ರಯೋಗಾಲಯ ವಿಭಾಗದ ಸೀನಿಯರ್ ಅನಾಲಿಸ್ಟ ವಿಜಯಲಕ್ಷ್ಮಿ, ಹಾಗೂ ಸಹಾಯಕ ಸಿಬ್ಬಂದಿ ಅರುಣ್ , ಗ್ರಾಮ ಪಂಚಾಯತ್ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 68 ಜನರು ಭಾಗವಹಿಸಿದ್ದರು. ಜಿಲ್ಲಾ
ಪ್ರಯೋಗಾಲಯದ ರಾಸಾಯನಿಕ ತಜ್ನೆ ವಿಜಯಲಕ್ಯ್ಮಿಯವರು ತರಭೇತಿಯನ್ನು ನಡೆಸಿಕೊಟ್ಟರು.
ಅನುಷ್ಠಾನ ಬೆಂಬಲ ಸಂಸ್ಥೆಯ ಗುಣವತಿಯವರು ನೀರಿನ ಮಹತ್ವ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ನ ಬಂಟ್ವಾಳ ತಾಲೂಕಿನ ಸಮುದಾಯ ಸಂಘಟಕಿಯಾದ ಗುಣವತಿಯವರು ಆಯೋಜಿಸಿ ಯಶಸ್ವಿಗೊಳಿಸಿದರು.














