Coastal Bulletin

ವಿವೇಕ ಜಾಗ್ರತ ಬಳಗ ಬಂಟ್ವಾಳ (ಡಿವೈನ್ ಪಾರ್ಕ್ ಟ್ರಸ್ಟ್ (ರಿ.) ಸಾಲಿಗ್ರಾಮ, ಉಡುಪಿ ಇದರ ಅಂಗ ಸಂಸ್ಥೆ) ದ ನರಿಕೊಂಬುವಿನ ವಿವೇಕ ಕಿರಣ ಮಂದಿರದ 14 ನೇ ವರ್ಧ೦ತ್ಯುತ್ಸವದ ಪ್ರಯುಕ್ತ ಶ್ರೀ ಸ್ಕಾಂದ ಮಹಾಪುರಾಣ ಪ್ರವಚನವು ಉಡುಪಿ ಪೇಜಾವರ ಶ್ರೀಕೃಷ್ಣ ಐಕ್ಯ ವಿಶ್ವೇಶ ತೀರ್ಥ ಶ್ರೀಪಾದರ ಶಿಷ್ಟರೂ ಹಾಗೂ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಧರ್ಮ ಪ್ರಚಾರಕ್ ಆದ ವಿದ್ಯಾನ್ ಶ್ರೀ ಕೆ.ಆರ್.ಶಶಾಂಕ ಭಟ್ ರವರು ಪ್ರತಿ ದಿನ ಸಂಜೆ 5:30 – 7:30 ರ ವರೆಗೆ ನಡೆಸಿಕೊಡುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಆಸ್ತಿಕ ಬಂಧುಗಳಿಗೆ ಆದರ ಪೂರ್ವಕ ಸ್ವಾಗತ. ಪ್ರವಚನ ಕಾರ್ಯಕ್ರಮವು ಡಿಸೆಂಬರ್ 11 ರಂದು ಆರಂಭಗೊಂಡಿದ್ದು, ಡಿಸೆಂಬರ್ 17 ರತನಕ ನಡೆಯಲಿದೆ.

ಡಿಸೆಂಬರ್ 18 ರಂದು ಭಾನುವಾರ ವಿವೇಕ ಕಿರಣ

ಮಂದಿರದ 14 ನೇ ವರ್ಧಂತಿ ಪ್ರಯುಕ್ತ ಸಂಜೆ 3.30ಕ್ಕೆ ಸಾಮೂಹಿಕ ದುರ್ಗಾ ಪೂಜೆ, ಸಂಜೆ 5 ಗಂಟೆ ಯಿಂದ ಧಾರ್ಮಿಕ ಸಭೆ, ಅನಂತರ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Leave a Comment