ಬಂಟ್ವಾಳ: ಇಲ್ಲಿನ ಪೇಟೆಯಲ್ಲಿರುವ ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಸಂಕ್ರಮಣ ಪೂಜೆಯ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ದಂಪತಿಯನ್ನು ಅಭಿನಂದಿಸಲಾಯಿತು.
ಈ ಸಂದರ್ಭ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಮನೆತನದವರಾದ ವಿಶ್ವನಾಥ ಪೂಜಾರಿ ಪೊಣ್ಣಂಗಿಲಗುತ್ತು, ಸಂಜೀವ ಪೂಜಾರಿ
ಗಾಣದಪಡ್ಪು, ಲೋಕೇಶ್ ಬಂಗೇರ ಗಾಣದಪಡ್ಪು, ಲೋಕನಾಥ ಪೂಜಾರಿ ಬಡಕೊಟ್ಟು, ಪ್ರಮುಖರಾದ ಮಹಾಬಲ ಬಂಗೇರ ಹಾಗೂ ಗ್ರಾಮಸ್ಥರು, ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.














