ಮಂಗಳೂರು: ಅರ್ಕುಳ ವಳಚ್ಚಿಲ್ ಪದವು ನಿವಾಸಿ ಯಾಗಿದ್ದ ದಿ.ಜಗದೀಶ್ ಪೂಜಾರಿ ಯವರು ಕಳೆದ ೧೮ ವರ್ಷಗಳ ಹಿಂದೆ ಮತಾಂಧರ ಕ್ರೌರ್ಯ ಕ್ಕೆ ಬಲಿಯಾದ ದುರ್ದೈವಿ. ಬೀಳುವ ಹಂತದಲ್ಲಿದ್ದ ಅವರ ಮನೆಗೆ ಶಾಸಕರಾದ ಡಾ ಭರತ್ ಶೆಟ್ಟಿ ಯವರು ಮನೆ ಕಟ್ಟಿ ಕೊಡುವ ಭರವಸೆಯಂತೆ ಇಂದು ಶಿಲಾನ್ಯಾಸ ಗೈದರು.
ಈ ಸಂದರ್ಭದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಅರ್ಕುಳ ತುಪ್ಪೆಕಲ್ಲು ಉಳ್ಳಾಕ್ಲು ಮಗ್ರಂತಾಯಿ ಗಡಿಕಾರರಾದ ಅರ್ಕುಳ ಕಂಪ ಸದಾನಂದ ಆಳ್ವ ,ಬಿಜೆಪಿ ಮಂಗಳೂರು ಉತ್ತರದ ಯುವಮೋರ್ಚಾ ಅಧ್ಯಕ್ಷರಾದ ಭರತ್ , ಗಣ್ಯರಾದ ಸಂತೋಷ್
ತುಪ್ಪೆಕಲ್ಲು ಜನಾರ್ಧನ ಅರ್ಕುಳ , ಸುಚನ್ ಅಡ್ಯಾರ್ , ದಿನೇಶ್ ಶೆಟ್ಟಿ ಕೊಟ್ಟಿಂಜ , ಕೆ ಆರ್ ಶೆಟ್ಟಿ ಅಡ್ಯಾರಪದವು ,ಶಕ್ತಿಕೇಂದ್ರ ಪ್ರಮುಖ್ ಜಯರಾಮ್ ಶೆಟ್ಟಿಗಾರ್ , ನಾಗನಾಗಿಣಿ ಕ್ಷೇತ್ರದ ಅಧ್ಯಕ್ಷರಾದ ಕೆ ಸತೀಶ್ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.














