ಬಂಟ್ವಾಳ:ಇಲ್ಲಿನ ನರಿಕೊಂಬು ಮತ್ತು ಶಂಭೂರು ಗ್ರಾಮಗಳಿಗೆ ಸಂಬಂಧಿಸಿದಂತೆ ಪಾಣೆಮಂಗಳೂರು ವಲಯ ಗಾಣಿಗರ ಸೇವಾ ಸಂಘದ ಅಧ್ಯಕ್ಷರಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ಸಪಲ್ಯ ಆಯ್ಕೆಯಾಗಿದ್ದಾರೆ.
ಇವರು ಮೂರು ಅವಧಿಗೆ ಗ್ರಾಮ.ಪಂ.ಸದಸ್ಯರಾಗಿ, ವಿದ್ಯುತ್ ಗುತ್ತಿಗೆದಾರರಾಗಿ, ಸುಮಂಗಲಾ ಕ್ರೆಡಿಟ್
ಸೊಸೈಟಿ ಮಾಜಿ ನಿರ್ದೇಶಕರಾಗಿ, ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ.













