ಬಂಟ್ವಾಳ :ತಾಲೂಕಿಗೆ ನೂತನ ತಹಶೀಲ್ದಾರ್ ಆಗಿ ಮಂಜುನಾಥ ಜಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ನಿಯುಕ್ತಿಗೊಳಿಸಿ ಸರಕಾರ ಅದೇಶಿಸಿದೆ.
ಪ್ರಸ್ತುತ ಮಂಜುನಾಥ ಜಿ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಬಂಟ್ವಾಳ ತಾಲೂಕಿಗೆ ವರ್ಗಾವಣೆಯಾಗಿ
ನಿಯುಕ್ತಿಗೊಳಿಸಲಾಗಿದೆ.
ರಾಜ್ಯದ ಐವತ್ತಕ್ಕು ಹೆಚ್ಚು ಮಂದಿ ತಹಶೀಲ್ದಾರರನ್ನು ವರ್ಗಾವಣೆಗೊಳಿಸಲಾಗಿದ್ದು, ಈ ಪಟ್ಟಿಯಲ್ಲಿ ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್ ಅವರು ಸೇರಿದ್ದಾರೆ.













