ಬೆಂಜನಪದವು:ನಾಪತ್ತೆಯಾಗಿದ್ದ ಯುವಕನೊರ್ವ ಶವವಾಗಿ ಪತ್ತೆ.

Coastal Bulletin
ಬೆಂಜನಪದವು:ನಾಪತ್ತೆಯಾಗಿದ್ದ ಯುವಕನೊರ್ವ ಶವವಾಗಿ ಪತ್ತೆ.

ಬಂಟ್ವಾಳ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನೊರ್ವ ಶವವಾಗಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಜೂ. 16ರಂದು ಬೆಳಗ್ಗೆ ನಡೆದಿದೆ.ಬೆಂಜನಪದವು ನಿವಾಸಿ ಸಾಗರ್(28) ಕೆರೆಯಲ್ಲಿ ಶವವಾಗಿ ಪತ್ತೆಯಾದ ಯುವಕನಾಗಿದ್ದಾನೆ.

ತಾಯಿಯ ಜತೆಗೆ ಬಿ.ಸಿ.ರೋಡಿಗೆ ಔಷಧಿಗೆ ಹೋಗಿ ಬಂದು ಬೆಂಜನಪದವುನಲ್ಲಿ ಇಳಿದು ನಾಪತ್ತೆಯಾಗಿದ್ದ ಬೆಂಜನ ಪದವು ಕಂಬಳ ಮನೆ ನಿವಾಸಿ ಯುವನ ಮೃತದೇಹ ಬೆಂಜನಪದವು ವಿದ್ಯಾನಗರ

ಹೈಸ್ಕೂಲ್ ರಸ್ತೆಯ ಹೊಂಡದಲ್ಲಿ ಪತ್ತೆಯಾಗಿದೆ.

ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಆತ ಕಾಲು ಜಾರಿ ಮೃತಪಟ್ಟಿರುವ ಸಾಧ್ಯತೆಯ ಕುರಿತು ಸಂಶಯಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment