ತುಂಬೆ: ಗ್ರಾ ಪಂ ನಲ್ಲಿ ಮಹಿಳಾ ಗ್ರಾಮ ಸಭೆ, ಮಹಿಳಾ ದೌರ್ಜನ್ಯ ಹಾಗೂ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಕಾರ್ಯಾಗಾರ.

Coastal Bulletin
ತುಂಬೆ: ಗ್ರಾ ಪಂ ನಲ್ಲಿ ಮಹಿಳಾ ಗ್ರಾಮ ಸಭೆ, ಮಹಿಳಾ ದೌರ್ಜನ್ಯ ಹಾಗೂ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಕಾರ್ಯಾಗಾರ.

ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮ ಪಂಚಾಯತ್‌ ನಲ್ಲಿ ಮಹಿಳಾ ಗ್ರಾಮ ಸಭೆಯು ಜ.17ನೇ ಶುಕ್ರವಾರ ಬೆಳಿಗ್ಗೆ ಪಂಚಾಯತ್ ಸಭಾಂಗಣ ದಲ್ಲಿ ನಡೆಸಲಾಯಿತು.

ಮಹಿಳಾ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ವಿಜಯ ವಾಣಿ ಮಹಿಳಾ ದೌರ್ಜನ್ಯ ಹಾಗೂ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿದರು.

 ಕಾರ್ಯಕ್ರಮದಲ್ಲಿ,ಪಂಚಾಯತ್‌ ಅಧ್ಯಕ್ಷೆ ಜಯಂತಿ ಕೇಶವ, ಉಪಧ್ಯಾಕ್ಷರಾದ ಗಣೇಶ್‌ ಸಾಲಿಯಾನ್‌, ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್‌ ಬಿ ತುಂಬೆ, ಪಂಚಾಯತ್‌

ಸದಸ್ಯರಾದ ಜಯಂತಿ ಶ್ರೀಧರ, ಜಯಂತಿ ನಾಗೇಶ್‌ ,ಆತಿಕಾಬಾನು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವುಲಾಲ್‌ ಚವ್ಹಾನ್‌ , ದ್ದಿತೀಯ ದರ್ಜೆ ಲೆಕ್ಕ ಸಹಾಯಕರಾದ ಚಂದ್ರಕಲಾ.ಜಿ ,ಪಂಚಾಯತ್‌ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಸಂಜೀವಿನಿ ಒಕ್ಕೂಟದ ಪಧಾದಿಕಾರಿಗಳು , ಹಾಗೂ ಸಾರ್ವಜನಿಕರು ಭಾಗವಹಿಸಿದರು.

Leave a Comment