ಬಂಟ್ವಾಳ :ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಜ.11ನೇ ಶನಿವಾರ ಶಾಲಾ ವಠಾರ ದ ನಡೆಯಿತು
ವಾರ್ಷಿಕೋತ್ಸವದ ಉದ್ಘಾಟನೆಯನ್ನು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಮಂಗ್ಲೀಮಾರ್ ಅಮ್ಟಾಡಿ ಇಲ್ಲಿಯ ಆಡಳಿತ ಮೊಕ್ತೇಸರರು ಹಾಗೂ ಕರ್ನಾಟಕ ಸರಕಾರದ ಧಾರ್ಮಿಕ ಪರಿಷತು ಇದರ ಖಾಯಂ ಆಹ್ವಾನಿತರಾದ ರವಿಶಂಕರ್ ಶೆಟ್ಟಿ ಬಡಾ ಜೆಗುತ್ತು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಸುನಿಲ್,ಮತ್ತು ಕಿರಣ್ , ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ,ಕೊಡುಗೈ ದಾನಿ ನರಸಿಂಹ ಹೊಳ್ಳ, ರಾಯಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೇಮಲತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಜಾತ,ಉಪಾಧ್ಯಕ್ಷರಾದ ಶುಭಲತ,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ
ಲೋಕೇಶ್ ಕುಲಾಲ್ ಮೈರ, ಭಾಗವಹಿಸಿದ್ದರು.
ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ ನ ವಿಶೇಷ ಆಹ್ವಾನಿತರಾಗಿ ಆಯ್ಕೆಯಾದ ರವಿ ಶಂಕರ್ ಶೆಟ್ಟಿ ಯವರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು.
ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು,ನಿವೃತ್ತಿ ಪಡೆದ ಮುಖ್ಯ ಶಿಕ್ಷಕರನ್ನು,ಅಡುಗೆ ಸಿಬ್ಬಂದಿಯವರ ನ್ನು,ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಈ ಶಾಲೆಯ ಹಳೇ ವಿದ್ಯಾರ್ಥಿ ಸುಧಾಕರ ಶೆಟ್ಟಿಯವರನ್ನು ವೇದಿಕೆ ಯಲ್ಲಿರುವ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಆರತಿ ಅಮೀನ್ ಸ್ವಾಗತಿಸಿ, ವರದಿ ವಾಚಿಸಿ,ಧನ್ಯವಾದ ನೀಡಿದರು.ಶಿಕ್ಷಕಿ ಅನಿತ ಕಾರ್ಯಕ್ರಮ ನಿರೂಪಿಸಿದರು.
ಗೌರವ ಶಿಕ್ಷಕಿ ಚೈತ್ರ ,ಮತ್ತು ವಿಜಯ ಮತ್ತು ಹಳೇ ವಿದ್ಯಾರ್ಥಿಗಳು ಸಹಕರಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಯಿತು.














